ಪಾಲ್ತಾಡು ಮಣಿಕರ ಶಾಲೆಯ ನೂತನ ಶಾಲಾ ಕೊಠಡಿ : ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಪುತ್ತೂರು. ಕೋಳ್ತಿಗೆ ಗ್ರಾಮದ ಮಣಿಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿಗಳ ಹಾಗೂ ಶಾಲಾ ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕಾಗಿ ಸ್ಮಾರ್ಟ್ ಕ್ಲಾಸ್ ಹಾಗೂ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪುತ್ತೂರಿನ ಜನಪ್ರಿಯ ಶಾಸಕರಾದ ಸಂಜೀವ ಮಠದೂರ್ ಉದ್ಘಾಟಿಸಿದರು.

ಮಣಿಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳ ದಾನಗೈದ ಮೇನಾಳ ದಿ. ಮೀಯಕ್ಕೆ ರೈ, (ಪಾಲ್ತಾಡು ಪಟೇಲ್ ದಿವಂಗತ ವೆಂಕಪ್ಪ ರೈ ಯವರ ಧರ್ಮಪತ್ನಿ ) ಇವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕೊಲ್ತಿಗೆ ಪಂಚಾಯತ್ ಅಧ್ಯಕ್ಷರಾದ ಶಾಮ್ ಸುಂದರ್ ರೈ ಗ್ರಾಮ ಪಂಚಾಯತ್ ಸದಸ್ಯರಾದ ಲತಾ ರೈ ಪಾಲ್ತಾಡು ಸುನಿಲ್ ಕುಮಾರ್ ರೈ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಹೀಂ ಮೂರ್ಕೇತಿ ಗಫೂರು ಸಾಹೇಬ್ ಪಾಲ್ತಾಡ್ ಸುಂದರ ಪೂಜಾರಿ ಮಣಿಕ್ಕರ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕ ಶಿಕ್ಷಕಿಯರು, ಪೋಷಕರು ಹಾಗೂ ಊರಿನ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
