ಪೇಪರ್ ಸ್ಟೂಡೆಂಟ್ ತುಳು ಸಿನಿಮಾ – ಡಿಸೆಂಬರ್ 23ರಂದು ಸಿನಿಮಾ ಬಿಡುಗಡೆ
ಪ್ರಥಮ ಫಿಲಮ್ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ತಯಾರಾದ ವಾದಿರಾಜ ಕೆ ಉಪ್ಪೂರು ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾ ಪೇಪರ್ ಸ್ಟೂಡೆಂಟ್ ತುಳು ಸಿನಿಮಾ ಡಿಸೆಂಬರ್ 23ರಂದು ಬೆಂಗಳೂರು, ಕರಾವಳಿ ಸೇರಿದಂತೆ ಮುಂಬೈ. ಗಲ್ಫ್ ರಾಷ್ಟಗಳಲ್ಲೂ ಬಿಡುಗಡೆಗೊಳ್ಳಲಿದೆ.
ಈ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಚಿತ್ರದ ನಿರ್ದೇಶಕ ವಾದಿರಾಜ್ ಕೆ ಉಪ್ಪೂರು ಅವರು ಮಾತನಾಡಿ ಪೇಪರ್ ಸ್ಟೂಡೆಂಟ್ ಎಂಬ ಚಲನಚಿತ್ರವು ಸ್ನೇಹ, ಪರಸ್ಪರ ನಂಬಿಕೆಯನ್ನು ಈ ಚಿತ್ರದಲ್ಲಿ ಕಾಣಬಹುದು. ಹರ್ಷಿತ್ ಶೆಟ್ಟಿ, ಗಗನ್ ಆಳ್ವ ಅವರು ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಯಶಸ್ವಿನಿ ದೇವಾಡಿಗ, ಸಲೋಮಿ ಡಿಸೋಜಾ, ಡೀನಾ ನಾಯಕಿಯಾಗಿ ನಟಿಸಿದ್ದಾರೆ. ಆಕರ್ಷ, ನಿರೀಕ್ಷಿತ್, ಸಾಯಿರಾಮ್, ಶಬರಿ, ಶ್ರೀಯಾ, ಸಚಿನ್ ಕುಂಬ್ಳೆ, ಮನ್ವಿ, ಪ್ರಸಾದ್ ಕುಮಾರ್, ರಮ್ಯಾ ಸುದೀಂದ್ರ, ಸೇರಿದಂತೆ 152 ಸದಸ್ಯರು ಅಭಿನಯಿಸಿದ್ದಾರೆ.