ಮಂಗಳೂರು : ಅಲೋಶಿಯಸ್ ಕಾಲೇಜಿನಲ್ಲಿ `ಮ್ಯಾಥ್ ಫಿಯೆಸ್ಟಾ 2ಕೆ22
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಅಂತರಕಾಲೇಜು ಫೆಸ್ಟ್ -`ಮ್ಯಾಥ್ ಫಿಯೆಸ್ಟಾ 2ಕೆ22 ಅನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ ಕೆ.ಎ.ಕೃಷ್ಣಮೂರ್ತಿ ಅವರ 109ನೇ ಜನ್ಮ ದಿನಾಚರಣೆಯ ನೆನಪಿಗಾಗಿ ವಿವಿಧ ಕಾಲೇಜುಗಳ ಯುಜಿ ವಿದ್ಯಾರ್ಥಿಗಳಿಗೆ ಒಂದು ದಿನದ ಅಂತರ ಕಾಲೇಜು ಫೆಸ್ಟ್ ಅನ್ನು ಆಯೋಜಿಸಲಾಗಿತ್ತು.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಎಫ್ ರಸ್ಕಿನ್ಹಾ ಹಾಲ್‌ನಲ್ಲಿ ಅಂತರಕಾಲೇಜು ಫೆಸ್ಟ್ -`ಮ್ಯಾಥ್ ಫಿಯೆಸ್ಟಾ 2ಕೆ22 ಚಾಲನೆ ಸಿಕ್ಕಿತ್ತು. ಇನ್ನು ಕಾರ್ಯಕ್ರಮವನ್ನು ಖ್ಯಾತ ವಾಣಿಜ್ಯೋದ್ಯಮಿ ಮತ್ತು ಹಳೆಯ ವಿದ್ಯಾರ್ಥಿ ವಾಲ್ಟರ್ ಡಿಸೋಜ ಅವರು ಉದ್ಘಾಟಸಿದ್ರು. ತದ ಬಳಿಕ ಮಾತನಾಡಿದ ಅವರು, ಡಾ.ಕೃಷ್ಣಮೂರ್ತಿ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊAಡರು ಮತ್ತು ಗಣಿತವನ್ನು ಕೊನೆಯ ಬೆಂಚರ್‌ಗಳಿಗೂ ಸರಳವಾಗಿಸಿದ ಅವರ ಬೋಧನಾ ವಿಧಾನವನ್ನು ನೆನಪಿಸಿಕೊಂಡರು. ಗಣಿತಶಾಸ್ತçವು ಎಲ್ಲಾ ಮೂಲ ವಿಜ್ಞಾನಗಳ ಮೂಲಭೂತ ವಿಷಯವಾಗಿದೆ ಎಂದು ಅವರು ಹೇಳಿದರು.
ವಾ.ಓಪ್ರಾಂಶುಪಾಲರಾದ ರೇ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ ಅಧ್ಯಕ್ಷತೆ ವಹಿಸಿ, ಮಾತನಾಡಿ, ಗಣಿತದ ಮಹತ್ವದ ಬಗ್ಗೆ ವಿವರಿಸಿದರು ಮತ್ತು ಮೂಲಭೂತ ವಿಜ್ಞಾನಗಳೊಂದಿಗೆ ಮುಂದುವರಿಯಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಪಿಜಿ ಗಣಿತಶಾಸ್ತ ವಿಭಾಗದ ಮುಖ್ಯಸ್ಥೆ ಅನುಪ್ರಿಯಾ ಶೆಟ್ಟಿ ಸ್ವಾಗತಿಸಿದ್ರು, ಡಾ ಶುಭಲಕ್ಷಿ ವಂದಿಸಿದರು.
ಈ ವೇಳೆ ಕಾಲೇಜಿನ ರಿಜಿಸ್ಟಾçರ್ ಮತ್ತು ಪರೀಕ್ಷಾ ನಿಯಂತ್ರಕರಾದ ಡಾ ಅಲ್ವಿನ್ ಡೇಸಾ, ವಿದ್ಯಾರ್ಥಿ ಸಂಯೋಜಕ ವಿನಯ ಆರ್.ಎ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು