HomeFresh Newsವಿಕಲಚೇತನರ ಪಿಂಚಣಿ ವಿಳಂಬ; ಶಾಸಕ ಅಶೋಕ್ ರೈಗೆ ಮನವಿ

ವಿಕಲಚೇತನರ ಪಿಂಚಣಿ ವಿಳಂಬ; ಶಾಸಕ ಅಶೋಕ್ ರೈಗೆ ಮನವಿ

ರಾಜ್ಯದಾದ್ಯಂತ ವಿಕಲ ಚೇತನರು, ಹಾಸಿಗೆ ಹಿಡಿದ ವಿಕಲ ಚೇತನರು, ಎಂಡೊ ಪೀಡಿತ ವಿಕಲ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಮಾಶಾಸಣ ಪಿಂಚಣಿ 2 ತಿಂಗಳಿಂದ ಬಾರದೆ ಜೀವನ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ. ಈ ಹಿನ್ನಲೆ ಯಲ್ಲಿ ಮೇ 18ರಂದು ಸೋಮವಾರದಂದು ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲ ಚೇತನರ ಸೇವಾ ಕೇಂದ್ರ ಕಚೇರಿ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರನ್ನು ಪುತ್ತೂರು ಶಾಸಕರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತ್ತು ಮನವಿ ಕೂಡಲೇ ಸ್ಪಂದಿಸಿದ ಶಾಸಕರಾದ ಶ್ರೀ ಅಶೋಕ್ ಕುಮಾರ್.ರೈ ಯವರು ಈ ಬಗ್ಗೆ ನಿರ್ದೇಶಕರು ಸಾಮಾಜಿಕ ಭದ್ರತೆ ಪಿಂಚಣಿಗಳ ನಿರ್ದೇಶನಾಲಯ ಬೆಂಗಳೂರು ಇವರಿಗೆ ಪತ್ರ ಬರೆದು 2ತಿಂಗಳು ಬಾರದೆ ಇರುವ ಪಿಂಚಣಿ ಗಳ ಸಮಸ್ಯೆ ಬಗ್ಗೆ ಹರಿಸುವುದ್ದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯ ಕರ್ತರಾದ ನವೀನ್ ಕುಮಾರ್, ಪುತ್ತೂರು ನಗರ ಸಭೆಯ ನಗರ ಪುನರ್ ವಸತಿ ಕಾರ್ಯ ಕರ್ತರಾದ ಭರತ್. ಕೆ ಕಡಬ ತಾಲ್ಲೂಕು ಬೆಳಂದೂರು ವಿಕಲ ಚೇತನರ ಗ್ರಾಮೀಣ ಪುನರ್ ವಸತಿ ಕರ್ತರಾದ ಶ್ರೀಮತಿ ಪ್ರಶಾಂತಿ ಆನಂದ ಗೌಡ, ಅಲಂಕಾರು ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ ವಸತಿ ಕರ್ತರಾದ ಮೋನಪ್ಪ ಬಿ, ಹಾಗೂ ವಿಕಲ ಚೇತನರು ಎಂಡೊ ಪೀಡಿತ ವಿಕಲ ಚೇತನರ ಆರೈಕೆ ದಾರರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments