HomeFresh Newsಫೋಟೋಗ್ರಾಫರ್ಸ್ ಅಸೋಸಿಯೇಷನ್ ಮೂಡುಬಿದಿರೆ ವಲಯ- ನೂತನ ಅಧ್ಯಕ್ಷರಾಗಿ ನಿತಿನ್ ಬೆಳುವಾಯಿ, ಪ್ರಧಾನ ಕಾರ್ಯದರ್ಶಿಯಾಗಿ ನಮಿತ್ ಬಂಗೇರಾ

ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮೂಡುಬಿದಿರೆ ವಲಯ- ನೂತನ ಅಧ್ಯಕ್ಷರಾಗಿ ನಿತಿನ್ ಬೆಳುವಾಯಿ, ಪ್ರಧಾನ ಕಾರ್ಯದರ್ಶಿಯಾಗಿ ನಮಿತ್ ಬಂಗೇರಾ

ಮೂಡುಬಿದಿರೆ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಮೂಡುಬಿದಿರೆ ವಲಯದ 15ನೇ ವಾರ್ಷಿಕ ಸಭೆಯು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ 2025/27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ನಿತಿನ್ ಬೆಳುವಾಯಿ , ಪ್ರಧಾನ ಕಾರ್ಯದರ್ಶಿಯಾಗಿ ನಮಿತ್ ಬಂಗೇರಾ, ಉಪಾಧ್ಯಕ್ಷರಾಗಿ ರಂಜಿತ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಪದ್ಮನಾಭ ಮಿಜಾರು, ಗೌರವಾಧ್ಯಕ್ಷರಾಗಿ ಉದಯ ಭಟ್, ಜೊತೆ ಕಾರ್ಯದರ್ಶಿಯಾಗಿ ಚಂದ್ರಹಾಸ ನೀರ್ಕೇರೆ, ಸಂಘಟನಾ ಕಾರ್ಯದರ್ಶಿಯಾಗಿ ಮಿಥುನ್, ಕ್ರೀಡಾ ಕಾರ್ಯದರ್ಶಿಗಳಾಗಿ ರೆಹಮಾನ್ ಮತ್ತು ವಿನಯ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭಾಸ್ಕರ್ ಕೋಟ್ಯಾನ್, ಛಾಯಾ ಕಾರ್ಯದರ್ಶಿಯಾಗಿ ಸತೀಶ್ ಅಳಿಯೂರು, ಪತ್ರಿಕಾ ಪ್ರತಿನಿಧಿಯಾಗಿ ಪ್ರಮೋದ್ ಪಾಲಡ್ಕ, ವಲಯ ಪ್ರತಿನಿಧಿಗಳಾಗಿ ರಾಜೇಶ್ ಕೆಲ್ಲ ಪುತ್ತಿಗೆ, ಪ್ರಕಾಶ್ ಭಟ್, ಕಾರ್ತಿಕ್ ಗಂಜಿಮಠ, ಸಮೀರ್, ಅನೀತ್ ಜೈನ್, ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ ರಾಜೇಶ್ ಅಮೀನ್, ಸುನಿಲ್ ಕೋಟ್ಯಾನ್, ರವಿ ಕೋಟ್ಯಾನ್, ಅಭಯ್ ಕುಮಾರ್ ಜೈನ್,ಇಕ್ಬಾಲ್ ಪುತ್ತಿಗೆ, ವಿಲ್ಫ್ರೆಡ್ ಮೆಂಡೋನ್ಸಾ ಆಯ್ಕೆಯಾದರು.

ಸಭೆಯ ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷ ರಾಜೇಶ್ ಅಮೀನ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಪದ್ಮ ಪ್ರಸಾದ್, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಸಲಹಾ ಸಮಿತಿ ಸಂಚಾಲಕ ಕರುಣಾಕರ ಕಾನಂಗಿ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಜಿಲ್ಲಾ ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್, ಜಿಲ್ಲಾ ಕಟ್ಟಡ ಸಮಿತಿ ವಲಯ ಪ್ರತಿನಿಧಿ ವಿಲ್ಫ್ರೆಡ್ ಮೆಂಡೋನ್ಸ, ಗೌರವಾಧ್ಯಕ್ಷರಾದ ಸುಂದರ ಸಾಲ್ಯಾನ್, ಸೊಸೈಟಿ ನಿರ್ದೇಶಕರಾದ ರಾಮ ಕೋಟ್ಯಾನ್, ಉಪಾಧ್ಯಕ್ಷ ಮನೋಜ್ ಪುತ್ತಿಗೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೋಟ್ಯಾನ್, ಕೋಶಾಧಿಕಾರಿ ರಂಜಿತ್ ಕೋಟ್ಯಾನ್, ಸದಸ್ಯರಾದ ಸುರೇಶ್ ಅಂಚನ್, ಉಪಸ್ಥಿತರಿದ್ದರು.

add - Rai's spices
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments