ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಪು ತಾಲೂಕು, ಕೆರೆ ಅಭಿವೃದ್ಧಿ ಸಮಿತಿ, ಕುರುಡಾಯಿಕೆರೆ ಇವರ ಸಹಭಾಗಿತ್ವದಲ್ಲಿ 847ನೇ ನಮ್ಮೂರು ನಮ್ಮ ಕೆರೆಯ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.
ಗಿಡ ನಾಟಿ ಕಾರ್ಯಕ್ರಮದಲ್ಲಿ 50 ವಿವಿಧ ಜಾತಿಯ ಹಣ್ಣಿನ ಗಿಡಗಳು ಮತ್ತು ಉತ್ತಮ ಸ್ವಾಸ್ಥ್ಯ ಪರಿಸರ ಪೂರಕ ಗಿಡಗಳನ್ನು ನಾಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆರೆ ಸಮಿತಿ ಸದಸ್ಯರಾದ ಸ್ಯಾಮ್ಸನ್, ರಮೇಶ್, ವಲೇರಿಯನ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಸರಿತಾ, ಕೇಂದ್ರ ಸಮಿತಿ ಅಧ್ಯಕ್ಷರಾದ ರಾಘ ವೇಂದ್ರ ಶೆಟ್ಟಿ, ಕೃಷಿ ಮೇಲ್ವಿಚಾರಕರಾದ ದೇವೇಂದ್ರ ಶೌರ್ಯ ವಿಪತ್ತು ತಂಡದ ಕ್ಯಾಪ್ಟನ್ ರಾಜು ಬೆಳ್ಳೆ, ಸೇವಾ ಪ್ರತಿನಿಧಿ ಲಕ್ಷ್ಮಿ,ಪದ್ಮ, ಶೌರ್ಯ ವಿಪತ್ತು ಸದಸ್ಯರು ಉಪಸ್ಥಿತರಿದ್ದರು.


