ಶಿಕ್ಷಕ ಪ್ರಸನ್ನ ಶೆಣೈಗೆ ಕಾಯಕ ಬಸವಶ್ರೀ ಪ್ರಶಸ್ತಿ
ಮೂಡುಬಿದಿರೆ: ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಸೃಷ್ಟಿ ಸಂಸ್ಥೆ (ರಿ) ಬೆಂಗಳೂರು ಇವರು ಮೂಡುಬಿದಿರೆಯ ಶಿಕ್ಷಕ ಪ್ರಸನ್ನ ಶೆಣೈ ಅವರ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಕರ್ನಾಟಕ ಕಾಯಕ ಬಸವ ಶ್ರೀ ಪ್ರಶಸ್ತಿ- 2023 ಗೆ ಆಯ್ಕೆ ಮಾಡಿದ್ದಾರೆ.21 ಸಲ ರಕ್ತದಾನ. 2 ರಕ್ತದಾನ ಶಿಬಿರ 2 ಸಲ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ 150 ಕ್ಕಿಂತ ಅಧಿಕ ಗಿಡ ನೆಟ್ಟು ಬೆಳೆಸಿದ್ದು ಮೂಡುಬಿದರೆ ಸಹಿಪ್ರ ಶಾಲೆ ಜ್ಯೋತಿನಗರದಲ್ಲಿ ಮಿಯವಾಕಿ ಮಾದರಿಯಲ್ಲಿ ನಗರ ಅರಣ್ಯವನ್ನು ನಿರ್ಮಿಸಿರುತ್ತಾರೆ.
10ಸಲ ನಮ್ಮ ಟಿ ವಿ ಚಾನೆಲ್ ಸಹಕಾರದಲ್ಲಿ ಕ್ಯಾಂಪಸ್ ಬಜ್ ಕಾರ್ಯಕ್ರಮ 2000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಆರೋಗ್ಯ ಸಿದ್ದಿ ಕಾರ್ಯಕ್ರಮವನ್ನು ಬೆಂಗಳೂರಿನ ಟೆಂಪಲ್ ಆಫ್ ಸಕ್ಸಸ್ ಸಹಕಾರ ದಿಂದ ನಡೆಸಿದ್ದಾರೆ.17ವರ್ಷದಿಂದ ಗೌಡ ಸಾರಸ್ವತ ಬ್ರಾಹ್ಮಣ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ. ಶಿಕ್ಷಕರ ಕುಟುಂಬದವರಿಗಾಗಿ ಪ್ರವಾಸಗಳು. ಪ್ರವಾಹದ ಸಮಯದಲ್ಲಿ 50,000ಕ್ಕೂ ಅಧಿಕ ರೂಪಾಯಿಗಳ ಪರಿಹಾರ ಸಾಮಗ್ರಿಗಳನ್ನು ತಹಶೀಲ್ದಾರರ ಮೂಲಕ ವಿದ್ಯಾರ್ಥಿಗಳಿಗಾಗಿ ನೀಡಿರುವುದನ್ನು ಮತ್ತು ಇನ್ನು ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸನ್ನ ಶೆಣೈ ಅವರನ್ನು ಆಯ್ಕೆ ಮಾಡಿದ್ದಾರೆ.ನಾಳೆ ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ