HomeFresh Newsಖಾಸಗಿ ಬಸ್ ಬ್ರೇಕ್ ಫೇಲ್ : ರಸ್ತೆ ಮೋರಿಗೆ ಸಿಲುಕಿಕೊಂಡ ಬಸ್ಸಿನ ಚಕ್ರಗಳು

ಖಾಸಗಿ ಬಸ್ ಬ್ರೇಕ್ ಫೇಲ್ : ರಸ್ತೆ ಮೋರಿಗೆ ಸಿಲುಕಿಕೊಂಡ ಬಸ್ಸಿನ ಚಕ್ರಗಳು

ಮೂಡುಬಿದಿರೆ ಸಮೀಪದ ಗಾಂಧಿನಗರದಲ್ಲಿ ಖಾಸಗಿ ಬಸ್ಸೊಂದು ಬ್ರೇಕ್ ಫೇಲ್ ಆದ ಪರಿಣಾಮ ರಸ್ತೆ ಬದಿಯ ಮೋರಿಗೆ ಚಕ್ರಗಳು ಸಿಲುಕಿಕೊಂಡ ಘಟನೆ ಸೋಮವಾರ ನಡೆದಿದೆ.

ಮುಲ್ಕಿ ಕಡೆಯಿಂದ ಮೂಡುಬಿದಿರೆ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಗಾಂಧಿನಗರದಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೋರಿಗೆ ಸಿಲುಕಿಕೊಂಡಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments