HomeFresh Newsಪುಣೆ ಸೇವಾ ಸಮಿತಿಯಂದ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಭಜೀರ್ಣೕೊದ್ಧಾರಕ್ಕೆ 1.5ಕೋಟಿ ರೂ. ದೇಣಿಗೆ

ಪುಣೆ ಸೇವಾ ಸಮಿತಿಯಂದ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಭಜೀರ್ಣೕೊದ್ಧಾರಕ್ಕೆ 1.5ಕೋಟಿ ರೂ. ದೇಣಿಗೆ

ಪಡುಬಿದ್ರಿ,ಪುಣೆಯ ಶ್ರೀ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ಸೇವಾ ಸಮಿತಿಯ ವತಿಯಿಂದ ಶ್ರೀ ದೇವಸ್ಥಾನದ ಸಮಗ್ರ ಜೀರ್ಣೕೊದ್ಧಾರ, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ದೇವರ ನವೀಕೃತ ಗರ್ಭಗುಡಿಯ ಸುಂದರ ರಚನೆಗಾಗಿ ಮಾ. 1ಭಾನುವಾರದಂದು ಸುಮಾರು 1.5 ಕೋಟಿ ರೂ. ಗಳನ್ನು
ಬಾಲಾಲಯದಲ್ಲಿ ನಡೆದ ಪ್ರಾರ್ಥನೆಯ ಬಳಿಕ ಈ ಮೊತ್ತವನ್ನು ಪುಣೆ ಉದ್ಯಮಿ ಸಂತೋಷ್‌ ಶೆಟ್ಟಿ ಕರ್ಕಿಲ್‌ ಬೆಟ್ಟಿ, ಸದಾನಂದ ಶೆಟ್ಟಿ ಮತ್ತಿತರರು ಶ್ರೀ ದೇಗುಲದ ಜೀರ್ಣೕೊದ್ಧಾರ ಸಮಿತಿಯ ಅಧ್ಯಕ್ಷ, ಬೆಂಗಳೂರಿನ ಉದ್ಯಮಿ ಡಾ| ಕೆ. ಪ್ರಕಾಶ್‌ ಶೆಟ್ಟಿ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೀರ್ಣೕೊದ್ಧಾರ ಸಮಿತಿಯ ಅಧ್ಯಕ್ಷ ಡಾ| ಕೆ. ಪ್ರಕಾಶ್‌ ಶೆಟ್ಟಿ ಅವರು, ಈ ದೇಗುಲದ ಜೀರ್ಣೕೊದ್ಧಾರವು ಬಹು ಹಿಂದಿನ ಕನಸಾಗಿತ್ತು. ಗುತ್ತಿಗೆದಾರ ಸುಜಯ ಶೆಟ್ಟಿ ಅವರ ಮುಂದಾಳುತ್ವದಲ್ಲಿ ಸಮಗ್ರ ನವೀಕರಣದ ಕೆಲಸ ಕಾರ್ಯಗಳು ರಾತ್ರಿ ಹಗಲೆನ್ನದೇ ನಡೆಯುತ್ತಿದೆ. ದೂರದ ಪೂನಕ್ಕೆ ಬದುಕು ಕಟ್ಟಲು ತೆರಳಿರುವ ನಮ್ಮೂರ ಬಂಧುಗಳು ಮಹಾಣಪತಿಯ ಅನುಗ್ರಹವನ್ನು ಬಯಸಿ ಈ ದೇಣಿಗೆಯನ್ನು ಕುರ್ಕಿಲ್‌ಬೆಟ್ಟು ಸಂತೋಷ್‌ ಶೆಟ್ಟಿ ಅವರ ನೇತೃತ್ವದಲ್ಲಿ ಸೇವಾ ಸಮಿತಿಯನ್ನು ರಚಿಸಿಕೊಂಡು ಇಂದಿನ ದೇಣಿಗೆಯನ್ನು ನೀಡಿದ್ದಾರೆ. ಎ. 23ರಿಂದ ನಡೆಯಲಿರುವ ವೈಭವದ ಬ್ರಹ್ಮಕಲಶೋತ್ಸವ ಸಮಾರಂಭಗಳಿಗೂ ತಾವೂ ಆಗಮಿಸಿ ಪಾಲ್ಗೊಳ್ಳುವಂತೆಯೂ ಡಾ| ಪ್ರಕಾಶ್ ಶೆಟ್ಟಿ ಅವರು ಆಹ್ವಾನಿಸಿದರು.

ಹಿರಿಯರಾದ ಉದ್ಯಮಿ ಸದಾನಂದ ಶೆಟ್ಟಿ ಮಾತನಾಡಿ, ಪಡುಬಿದ್ರಿಯ ಒಡೆಯ ಶ್ರೀ ಮಹಾಲಿಂಗೇಶ್ವರನಾದರೆ, ನಿಜವಾದ ರಾಜ ಶ್ರೀ ಮಹಾಗಣಪತಿ ದೇವರು ಎಂದರು. ಪುಣೆ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್‌ ಶೆಟ್ಟಿ ಕುರ್ಕಿಲ್‌ಬೆಟ್ಟು ಮಾತನಾಡಿ, ಬ್ರಹ್ಮಕಲಶೋತ್ಸವ ಸಂದರ್ಭದಲ್ಲೂ ಪುಣೆಯ ಭಕ್ತರು ಶ್ರೀ ದೇವರ ಸೇವೆಗಾಗಿ ಈಗಾಗಲೇ ಕಟಿಬದ್ಧರಾಗಿದ್ದಾರೆ ಎಂದರು.

ಶ್ರೀ ದೇಗುಲದ ಅರ್ಚಕ ಎಚ್‌. ಪದ್ಮನಾಭ ಭಟ್‌, ಅನುವಂಶಿಕ ಮೊಕ್ತೇಸರ ಪೇಟೆಮನೆ ಭವಾನಿಶಂಕರ ಹೆಗ್ಡೆ, ರವಿಂದ್ರನಾಥ ಜಿ. ಹೆಗ್ಡೆ, ಸುರೇಶ್‌ ಶೆಟ್ಟಿ ಮೂಡುಗುಂಡ್ಲಾಡಿ, ವಿಷ್ಣುಮೂರ್ತಿ ಆಚಾರ್ಯ, ನವೀನ್‌ಚಂದ್ರ ಜೆ. ಶೆಟ್ಟಿ, ಅನಿಲ್‌ ಹೆಗ್ಡೆ ಪೇಟೆಮನೆ, ನವೀನ್‌ ಶೆಟ್ಟಿ, ಮಾಧವ ಶೆಟ್ಟಿ, ರಮಾಕಾಂತ ರಾವ್‌, ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್‌ ಹೆಗ್ಡೆ, ಜಿತೇಂದ್ರ ಹೆಗ್ಡೆ, ಕುಶಲ ಹೆಗ್ಡೆ, ಕೆ.ಕೆ. ಶೆಟ್ಟಿ, ಗಣೇಶ್‌ ಹೆಗ್ಡೆ, ಸುಧೀರ್‌ ಶೆಟ್ಟಿ, ಸುಧಾಕರ ಶೆಟ್ಟಿ, ಕರುಣಾಕರ ಶೆಟ್ಟಿ, ಚಂದ್ರಹಾಸ ಎಲ್‌. ಶೆಟ್ಟಿ, ದಿನೇಶ್‌ ಶೆಟ್ಟಿ, ಶೇಖರ ಶೆಟ್ಟಿ, ಸುಧಾಕರ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರಸನ್ನ ಶೆಟ್ಟಿ, ಬಾಲಜಿತ್‌ ಶೆಟ್ಟಿ, ಜಗದೀಶ್‌ ಶೆಟ್ಟಿ ಪಿಂಪ್ರಿ, ಗೀತಾ ಜಯ ಶೆಟ್ಟಿ, ಶಮ್ಮಿ ಹೆಗ್ಡೆ, ರೇಶ್ಮಾ ಶೆಟ್ಟಿ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments