ಪುತ್ತೂರು: ರಸ್ತೆ ಬದಿಯಲ್ಲಿದ್ದ ಮರದ ರೆಂಬೆ ಕಡಿದ ಪ್ರಕರಣ : ನಾಲ್ವರ ವಿರುದ್ಧ ಕೇಸ್

ಪುತ್ತೂರು : ಸೆ 12 : ರಸ್ತೆ ಬದಿಯಲ್ಲಿದ್ದ ಮರದ ರೆಂಬೆ ಕೊಂಬೆಗಳನ್ನು ಅಕ್ರಮವಾಗಿ ಕಡಿದಿದ್ದಾರೆ ಎಂದು ಆರೋಫಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಸಹಿತ ನಾಲ್ವರ ವಿರುದ್ದ ಸೆ 12 ರಂದು ಪ್ರಕರಣ ದಾಖಲಾಗಿದೆ. ಪುತ್ತೂರು ಉಪವಿಭಾಗದ ಪುತ್ತೂರು ಅರಣ್ಯ ವಲಯವು ಪ್ರಕರಣ ದಾಖಲಿಸಿಕೊಂಡಿದೆ.
ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯ ನಿರ್ವಹಣಾ ಅಧಿಕಾರಿ ಲಕ್ಷ್ಮಣ ಹಾಗೂ ನಿರ್ದೇಶಕರಾದ ರವೀಂದ್ರ ಭಂಡಾರಿ,ಚಂದ್ರ ಮತ್ತು ಪ್ರಕಾಶ್ ಎಂಬುವರ ವಿರುದ್ದ ಅಕ್ರಮ ಮರ ಕಡಿದಿರುಳಿಸಿದ ಬಗ್ಗೆ ಅರಣ್ಯ ಇಲಾಖೆಯ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

puttur

ಪುತ್ತೂರಿನಿಂದ ಪಾಣಾಜೆಗೆ ಸೆಂಟ್ಯಾರ್ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಆರ್ಲಪದವು ಜಂಕ್ಷನ್ನಲ್ಲಿ ನಿಂತಿರುವ ಗೊಳಿ ಮರದ ರೆಂಬೆ ಕೊಂಬೆಗಳನ್ನು ಭಾನುವಾರ (ಸೆ 11 ರಂದು ) ಕಡಿದುರುಳಿಸಲಾಗಿತ್ತು. ಹೀಗಾಗಿ ಬಗ್ಗೆ ಸ್ವಯಂ ಪ್ರೇರಣೆಯಿಂದ ತನಿಖೆ ಆರಂಭಿಸಿದ ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಸದರಿ ಪ್ರಕರಣದ ತನಿಖೆಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಾದ V P ಕಾರ್ಯಪ್ಪ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಬಿ ಎಂ ರವರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪಾಣಾಜೆ ಶಾಖಾ ಉಪ ವಲಯ ಅರಣ್ಯ ಅಧಿಕಾರಿ ಪ್ರಕಾಶ್ B T ,ಅರಣ್ಯ ರಕ್ಷಕರಾದ ನಿಂಗರಾಜ್ ,ಅರಣ್ಯ ವೀಕ್ಷಕರಾದ ದೇವಪ್ಪನಾಯ್ಕ ತನಿಖೆಯ ಭಾಗವಾಗಿದ್ದರು.

ವಾತಾವರಣ ಹಾಗು ಪರಿಸರದ ಸ್ವಾಸ್ಥ್ಯವನ್ನು ಕಾಪಾಡಲು ಮರ ಗಿಡಗಳು ಅನಿವಾರ್ಯವಾಗಿದ್ದು ಜಾಗತಿಕ ತಾಪಮಾನ ಏರಿಕೆ ಕಾಣುತ್ತಿರುವ ಈ ಸಂದರ್ಭದಲ್ಲಿ ಇದನ್ನು ಉಳಿಸುವುದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜ್ಞಾವಂತರೆನಿಸಿಕೊಂಡವರೇ ಮರ ನಾಶ ಮಾಡುವ ಪ್ರಯತ್ನ ಮಾಡುವುದು ಅಕ್ಷಮ್ಯ . ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸೊ ಮೋಟೋ ಪ್ರಕರಣ ದಾಖಲಿಸಿಕೊಂಡಿರುವುದು ಸ್ವಾಗಾತರ್ಹ ನಡೆ ಎನ್ನುತ್ತಾರೆ ಸಾರ್ವಜನಿಕರು.

Related Posts

Leave a Reply

Your email address will not be published.