ಪಂಚಾಯತ್‍ಗೆ ಬರುವ ಅನುದಾನದಲ್ಲಿ ಹಸ್ತಕ್ಷೇಪ : ನಮ್ಮ ಹಕ್ಕಿಗೆ ಚ್ಯುತಿ ಬಾರದಂತೆ ಪ್ರತಿಭಟಿಸುತ್ತೇವೆ : ಸುಭಾಶ್ರಚಂದ್ರ ಶೆಟ್ಟಿ

ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡುವ ಮೂಲಕ ಬಿಜೆಪಿ ಸರಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ನಿಟ್ಟಿನಲ್ಲಿ ಒಂದೊಂದು ಕೆಲಸಗಳನ್ನು ಮಾಡುತ್ತಿದೆ ಎಂದು ರಾಜೀವಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಶ್ರಚಂದ್ರ ಶೆಟ್ಟಿ ಆರೋಪಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿಭಟನೆ ಮೂಲಕ ಕಾಂಗ್ರೆಸ್ ತನ್ನ ಮೇಲೆ ಅಪಪ್ರಚಾರ ಮಾಡುತ್ತಿದೆ ಎಂದು ಶಾಸಕರು ಹೇಳಿರುವುದು ಕಡಿಮೆ ತಿಳುವಳಿಕೆ ಇರುವುದರಿಂದ ಎಂದು ಹೇಳಿದ ಅವರು, ನಾವು ಯಾವುದೇ ದಾಖಲೆಯಿಲ್ಲದೆ ಮಾಡಿದ ಸುಮ್ಮನೆ ಪ್ರತಿಭಟನೆ ಮಾಡುವುದಿಲ್ಲ, ಆರೋಪವನ್ನೂ ಮಾಡುವುದಿಲ್ಲ ಎಂದು ತಿಳಿಸಿದರು.
ಇದೊಂದು ಪಂಚಾಯಿತಿ ಸದಸ್ಯರ ಹಕ್ಕಿನ ಪ್ರಶ್ನೆಯಾಗಿದ್ದು, ಪಂಚಾಯಿತಿ ವ್ಯವಸ್ಥೆ ಶಾಸಕ ಸುಪರ್ದಿಯಲ್ಲಿರಬೇಕು ಎಂಬ ನಿಟ್ಟಿನಲ್ಲಿ ಪಂಚಾಯಿತಿಗಳಿಗೆ ಬರುವ ಅನುದಾನದಲ್ಲಿ ಹಸ್ತಕ್ಷೇಪ ಮಾಡಿರುವ ಸರಕಾರದದ ವಿರುದ್ಧ ನಾವು ನಮ್ಮ ಹಕ್ಕಿಗೆ ಚ್ಯುತಿ ಬಾರದಂತೆ ಪ್ರತಿಭಟಸುತ್ತೇವೆ. ಇಷ್ಟೆಲ್ಲಾ ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಬುಡಮೇಲು ಆಗುತ್ತಿರುವ ಪರಿಸ್ಥಿತಿಯಲ್ಲಿ ಪಂಚಾಯಿತಿರಾಜ್ ವ್ಯವಸ್ಥೆ ಕುರಿತು ಅನುಭವವಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯಾಕೆ ಸುಮ್ಮನಿದ್ದಾರೆ. ವ್ಯವಸ್ಥೆಯ ಕುರಿತು ಸ್ವೀಕಾರ್ಹ, ರದ್ದಾದ ಆದೇಶ ಇದುವರೆಗೂ ಯಾವ ಪಂಚಾಯಿತಿಗೂ ಬಂದಿಲ್ಲ. ಈ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಟ್ಲ-ಉಪ್ಪಿನಂಗಡಿ ಘಟಕದ ಹಸೈನಾರ್, ಪುತ್ತೂರು ಬ್ಲಾಕ್ ಸಂಚಾಲಕ ಸಂತೋಷ್ ಭಂಡಾರಿ, ಬ್ಲಾಕ್ ಎಸ್‍ಸಿ ಘಟಕದ ಕೇಶವ ಪಡೀಲ್ ಉಪಸ್ಥಿತರಿದ್ದರು.
