ಕರ್ನಾಟಕ ರಾಜ್ಯದಿಂದ ರಾಜ್ಯ ಸಭೆಗೆ ನಡೆಯುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ, ಮನ್ಸೂರ್ ಆಲಿ ಖಾನ್ ಈ ಮೂವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಘೋಷಣೆ ಮಾಡಲಾಗಿದೆ.

ಜೂನ್ ಹದಿನೆಂಟರಂದು ನಡೆಯುವ ರಾಜ್ಯ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಏಳು ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕರ್ನಾಟಕದಿಂದ ಗೆಲ್ಲಲು ಮೂವರಿಗೆ ಅವಕಾಶವಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಹಾಗು ಎಐಸಿಸಿ ಅಧ್ಯಕ್ಷ ಮನ್ಸೂರ್ ಆಲಿ ಖಾನ್ ಇಲ್ಲಿ ಅವಕಾಶ ಪಡೆದಿದ್ದಾರೆ. ಖರ್ಗೆಯವರು ಮತ್ತೆ ರಾಜ್ಯದಿಂದ ರಾಜ್ಯ ಸಭೆಗೆ ಹೋಗುತ್ತಿದ್ದಾರೆ.

ಮಧ್ಯ ಪ್ರದೇಶದಿಂದ ಮೀನಾಕ್ಷಿ ನಟರಾಜನ್, ರಾಜಸ್ತಾನದಿಂದ ನೀರಜ್ ಡಾಂಗಿ, ಜಾರ್ಖಂಡ್ನಿಂದ ಪ್ರಣವ್ ಜ್ಹಾ, ತಮಿಳುನಾಡಿನಿಂದ ಪ್ರವೀಣ್ ಚಕ್ರವರ್ತಿ ಟಿಕೆಟ್ ಪಡೆದಿದ್ದಾರೆ. ತಮಿಳುನಾಡಿನಲ್ಲಿ ಮಾತ್ರ ಮುಖ್ಯಮಂತ್ರಿ ವಿಜಯ್ ದಯದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕಾಗಿದೆ. ಜೂನ್ 18ರಂದು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.


