ಬೆಂಗಳೂರಿನ ರಾಜೇಶ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಕಂಪೆನಿಯು ಮೂಲವೇ ಇಲ್ಲದ ಹದಿನೈದು ಲಕ್ಷ ಕೋಟಿ ರೂಪಾಯಿ ತಪ್ಪು ಲೆಕ್ಕ ಕೊಟ್ಟಿದೆ ಎಂದು ಭಾರತೀಯ ಶೇರು ನಿಯಂತ್ರಣ ಮಂಡಳಿ ಹೇಳಿದೆ. ಬೆಂಗಳೂರಿನ ರಾಜೇಶ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಸಂಸ್ಥೆಯು ಚಿನ್ನದ ರಫ್ತು ವಹಿವಾಟಿನಲ್ಲಿ ತೊಡಗಿದೆ.

ಶೇರು ಪೇಟೆಯಲ್ಲಿ ನೋಂದಾಯಿತವಾದ ಈ ಕಂಪೆನಿಯು ಸುಳ್ಳು ಲೆಕ್ಕ ಕೋಟಿ ಕೋಟಿ ರೂಪಾಯಿ ಶೇರು ಸಂಗ್ರಹ ಮಾಡಿದೆ. ಸ್ವಿಜರ್ಲ್ಯಾಂಡಿನಲ್ಲರುವ ತನ್ನ ಸಹ ಸಂಸ್ಥೆ ವಲ್ಕಂಬಿಯಿಂದ ತನಗೆ ಅಪಾರ ಲಾಭದ ಪಾಲು ಬಂದಿರುವುದಾಗಿ ಈ ಕಂಪೆನಿ ಹೇಳಿಕೊಂಡಿದೆ.

ವಲ್ಕಂಬಿ ಅಮೂಲ್ಯ ಲೋಹಗಳ ಸಂಸ್ಕರಣೆ ಮಾಡುವ ಕಂಪೆನಿ. ರಾಜೇಶ್ ಎಕ್ಸ್ಪೋರ್ಟ್ ಚಿನ್ನದ ಆಭರಣ ಮತ್ತು ಸಂಸ್ಕರಿಸಿದ ಬಂಗಾರ ರಫ್ತು ಮಾಡುವ ಕಂಪೆನಿ ಎನ್ನಲಾಗಿದೆ. ಗ್ಲೋಬಲ್ ಗೋಲ್ಡ್ ರಿಫೈನರೀಸ್ ಮಾಲಿಕತ್ವದ ವಲ್ಕಂಬಿಯು ಕೊಟ್ಟಿರುವ ಲೆಕ್ಕಕ್ಕೂ, ರಾಜೇಶ್ ಕೊಟ್ಟಿರುವ ಲೆಕ್ಕಕ್ಕೂ ತಾಳೆಯೇ ಇಲ್ಲ ಎನ್ನಲಾಗಿದೆ.

2023ರಲ್ಲಿ ಇದರ ವರಮಾನ 543 ಕೋಟಿ ರೂಪಾಯಿ ಎಂದೂ, ಇದೇ ಅವಧಿಯ ಜಿಜಿಆರ್ ವರಮಾನ 2.93 ಲಕ್ಷ ಕೋಟಿ ಎಂದಿದೆ. ಅಲ್ಲಿಗೆ ಲಾಭದ ಪ್ರಮಾಣ 0.5 ಶೇಕಡಾಕ್ಕಿಂತಲೂ ಕಡಿಎಮ. ರಾಜೇಶ್ ಎಕ್ಸ್ಪೋರ್ಟ್ಸ್ನಲ್ಲಿ ಎಲ್ಐಸಿಯ ಹನ್ನೊಂದು ಶೇಕಡಾ ಪಾಲು ಬಂಡವಾಳ ಇದೆ.

ಸುಳ್ಳು ವ್ಯವಹಾರ, ತಪ್ಪು ಲಾಭ, ಲೆಕ್ಕ ತೋರಿಸಿ ಶೇರು ಸಂಗ್ರಹ ಅವ್ಯವಹಾರ ಮಾಡಿದೆ ಎನ್ನಲಾಗಿದೆ. ಕೇಂದ್ರದ ಬಿಜೆಪಿ ಸರಕಾರದ ಒತ್ತಡದಿಂದ ಎಲ್ಐಸಿ ರಾಜೇಶ್ ಎಕ್ಸ್ಫೋರ್ಟ್ಸ್ನಲ್ಲಿ ತನ್ನ ಬಹುದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

