HomeFresh Newsಶೈಕ್ಷಣಿಕ ಸಾಧನೆಯಲ್ಲಿ ಸೈಂಟ್ ಅಲೋಶಿಯಸ್‌ನ ಹಳೆ ವಿದ್ಯಾರ್ಥಿ ರಶಾ ಫಾತಿಮಾ

ಶೈಕ್ಷಣಿಕ ಸಾಧನೆಯಲ್ಲಿ ಸೈಂಟ್ ಅಲೋಶಿಯಸ್‌ನ ಹಳೆ ವಿದ್ಯಾರ್ಥಿ ರಶಾ ಫಾತಿಮಾ

ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿನಿ ರಶಾ ಫಾತಿಮಾ ಅವರು ಕಳೆದ ಡಿಸೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ನಡೆಸಿದ ಸುಧಾರಿತ ಹಣಕಾಸು ನಿರ್ವಹಣೆಯ ವಿಷಯದಲ್ಲಿ ವಿಶ್ವದಲ್ಲಿ 10 ರ್‍ಯಾಂಕ್ ಮತ್ತು ಅಖಿಲ ಭಾರತದಲ್ಲಿ 3ನೇ ರ್‍ಯಾಂಕ್ ಗಳಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ರಶಾ ಫಾತಿಮಾ ಅವರ ಸಾಧನೆ ವಿಶ್ವವಿದ್ಯಾನಿಲಯಕ್ಕೆ ಮತ್ತು ವಾಣಿಜ್ಯ ಹಣಕಾಸು ಮತ್ತು ಲೆಕ್ಕಪತ್ರ ಸಂಸ್ಥೆಗಳಿಗೆ ಹೆಮ್ಮೆಯ ವಿಷಯವಾಗಿದೆ. ಸಂತ ಅಲೋಶಿಯಸ್ ಸಂಸ್ಥೆಯ ಉಪಕುಲಪತಿಗಳು, ಅಧ್ಯಾಪಕ ಸದಸ್ಯರು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಾಧಕಿ ರಶಾ ಫಾತಿಮಾ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments