ವಾಷಿಂಗ್ಟನ್ ಡಿಸಿ ಮೇಯರ್ ಚುನಾವಣೆಗೆ ಭಾರತ ಮೂಲದ, ದಕ್ಷಿಣ ಏಶಿಯಾ ಮೂಲದ ಮೊದಲ ಮಹಿಳೆಯಾಗಿ ರಿನಿ ಸಂಪತ್ ಸ್ಪರ್ಧಿಸುತ್ತಿದ್ದಾರೆ.

ತನ್ನ ಏಳನೆಯ ವರುಷದಲ್ಲಿ ಹೆತ್ತವರ ಜೊತೆಗೆ ಯುಎಸ್ಎ ಪಾಲಾದವರು ರಿನಿ ಸಂಪತ್. ತಮಿಳುನಾಡಿನ ತೇನೀ ಮೂಲದವರು.

ಯುಎಸ್ಎ ಪ್ರಜೆಯಾಗಿರುವ ರಿನಿ ಸಂಪತ್ ಅವರು ಆರಂಭದಿಂದಲೂ ಡೆಮಾಕ್ರೆಟಿಕ್ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದಾರೆ. ವಾಷಿಂಗ್ಟನ್ ಡಿಸಿಯ ನಾಗರಿಕರಿಗೆ ಎಲ್ಲ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ನನ್ನ ಆದ್ಯತೆ ಎಂದು ತನ್ನ ಪ್ರಚಾರವನ್ನು ಅವರು ಆರಂಭಿಸಿದ್ದಾರೆ.

ಮೂವತ್ತೊಂದರ ಪ್ರಾಯದ ರಿನಿಯವರು ದಶಕಕ್ಕೂ ಹೆಚ್ಚು ಕಾಲದಿಂದ ವಾಷಿಂಗ್ಟನ್ ನಿವಾಸಿಯಾಗಿ ಇದ್ದಾರೆ. ಅಮೆರಿಕದ ಕನಸಿನೊಂದಿಗೆ ಬಂದು, ಅದನ್ನು ನನಸಾಗಿಸುವಲ್ಲಿ ಹೆಜ್ಜೆ ಇಡುತ್ತಿದ್ದೇನೆ.

ಆ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರವೂ ಅಗತ್ಯ. ನಗರ ಪಾಲಕರು ವಿಫಲರಾಗಿದ್ದಾರೆ, ಅದನ್ನೆಲ್ಲ ಸರಿಪಡಿಸಲು ಶ್ರಮಿಸುತ್ತೇನೆ ಎಂದು ರಿನಿಯವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.

ರಿನಿಯವರು ಸರಕಾರೀ ಕಾಂಟ್ರಾಕ್ಟರ್ ಆಗಿಯೂ ಯಶಸ್ವೀ ಮಹಿಳೆ ಎನಿಸಿದ್ದಾರೆ. ಎಲ್ಲರೂ ಹೊಂದಬಹುದಾದ ಮನೆ, ಬಾಡಿಗೆ ಇಳಿಸುವುದು, ರಸ್ತೆ ಗುಂಡಿ ಹಾಗೂ ಮುರಿದಿರುವ ನಡೆದಾರಿಗಳನ್ನು ಸರಿಗೊಳಿಸಿ ನಗರದ ಸಂರಚನೆಗಳನ್ನು ಸುಸ್ಥಿತಿಗೆ ತರುವುದು ಅವರ ಆಶ್ವಾಸನೆಯ ಮುಖ್ಯ ಆಶ್ವಾಸನೆಗಳಾಗಿವೆ.

ತುರ್ತು ಸೇವೆಯ 911 ಹಾಗೂ 311 ಸೇವೆಗಳನ್ನು ಖಚಿತಪಡಿಸುವುದೂ ಅವರ ಗುರಿ. ವಾಷಿಂಗ್ಟನ್ನನ್ನು ಸ್ವಾಗತಿಸುವ ನಗರವಾಗಿಸುವ ಗುರಿಯ ರಿನಿಯವರು ಯುಎಸ್ಎ ಅಧ್ಯಕ್ಷ ರೊನಾಲ್ಡ್ ಟ್ರಂಪ್ರ ನೀತಿಗಳನ್ನು ತೀವ್ರವಾಗಿ ವಿರೋಧಿಸುತ್ತಾರೆ.
