HomeUncategorizedರಕ್ಷಣಾ ಸಂಬಂಧಿ ಖರ್ಚು| ಐದನೆಯ ಸ್ಥಾನದಲ್ಲಿ ಭಾರತ | ಮೊದಲ ಸ್ಥಾನದಲ್ಲಿದೆ ಯುಎಸ್‌ಎ

ರಕ್ಷಣಾ ಸಂಬಂಧಿ ಖರ್ಚು| ಐದನೆಯ ಸ್ಥಾನದಲ್ಲಿ ಭಾರತ | ಮೊದಲ ಸ್ಥಾನದಲ್ಲಿದೆ ಯುಎಸ್‌ಎ

ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಹೊಸ ರಕ್ಷಣಾ ವೆಚ್ಚದ ವರದಿ ಬಿಡುಗಡೆ ಮಾಡಿದ್ದು, ಭಾರತವು ಇದರಲ್ಲಿ ಐದನೆಯ ಸ್ಥಾನದಲ್ಲಿದೆ.


ಶಾಂತಿ ಮಾತುಕತೆ ನಡೆದಂತೆಯೇ ಜಗತ್ತು ಯುದ್ಧ ಭೀತಿಯನ್ನು ಎದುರಿಸುತ್ತಿದೆ. ಹಾಗಾಗಿ ಪ್ರತಿಯೊಂದು ದೇಶವೂ ರಕ್ಷಣಾ ಬಾಬತ್ತಿಗೆ ಸಾಕಷ್ಟು ವೆಚ್ಚ ಮಾಡುತ್ತಿವೆ.

ಈ ವಿಷಯದಲ್ಲಿ ಭಾರತವು ಐದನೆಯ ಸ್ಥಾನದಲ್ಲಿ ಇದೆ. ಕಳೆದ ಹಣಕಾಸು ವರುಷದಲ್ಲಿ ಭಾರತದ ರಕ್ಷಣಾ ವೆಚ್ಚವು 8.9 ಶೇಕಡಾ ಹೆಚ್ಚಳ ಕಂಡಿದೆ; ಆದ ವೆಚ್ಚ 9,200 ಕೋಟಿ ಡಾಲರ್.


ಅಮೆರಿಕ ಸಂಯುಕ್ತ ಸಂಸ್ಥಾನ, ಚೀನಾ, ರಶಿಯಾ, ಜರ್ಮನಿ ದೇಶಗಳು ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿ ಇವೆ.

ಭಾರತವೂ ಸೇರಿ ಈ ಐದು ದೇಶಗಳು ಜಾಗತಿಕವಾಗಿ ಎಲ್ಲ ದೇಶಗಳ ರಕ್ಷಣಾ ವೆಚ್ಚದ 58 ಶೇಕಡಾ ಪಾಲನ್ನು ತಾವು ವ್ಯಯಿಸುತ್ತಿವೆ.

ಯುಎಸ್‌ಎ 95,400ಕೋಟಿ ಡಾಲರ್ ಹಾಗೂ ಚೀನಾವು 33,600 ಕೋಟಿ ಡಾಲರ್ ಈ ಬಾಬತ್ತು ವ್ಯಯಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments