HomeFresh Newsಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ನಿಂದ 83 ನೇ ಸೇವಾ ಯೋಜನೆ ಹಸ್ತಾಂತರ

ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ನಿಂದ 83 ನೇ ಸೇವಾ ಯೋಜನೆ ಹಸ್ತಾಂತರ

ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕಾನ ಪರಿಸರದ ಆನಂದ ಮುಗೇರ ಎಂಬವರ ಆರೋಗ್ಯದ ಸಮಸ್ಯೆಗೆ ಸ್ಪಂದಿಸಿರುವ ಸಾಯಿ ಮಾನಾ೯ಡ್ ಸೇವಾ ಟ್ರಸ್ಟ್ ಅಮನಬೆಟ್ಟು ಚಿಕಿತ್ಸೆಗಾಗಿ 83ನೇ ಸೇವಾ ಯೋಜನೆಯ ನವೆಂಬರ್ ತಿಂಗಳ ಎರಡನೇ ಯೋಜನೆಯ ರೂ. 10,000ದ ಚೆಕ್ಕನ್ನು ಡಿಸೆಂಬರ್ 1ರಂದು ಹಸ್ತಾಂತರಿಸಿದೆ.

43ವರ್ಷ ಪ್ರಾಯ ದ ಆನಂದ ಮುಗೇರ ಅವರು ಬಾಯಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇದುವರೆಗೆ ಸುಮಾರು ಹಣವನ್ನು ಖರ್ಚು ಮಾಡಲಾಗಿದೆ. ಈಗ ಮಂಗಳೂರು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ ಅವರಿಗೆ ಮದುವೆ ಆಗಿದ್ದು ಮಕ್ಕಳಿಲ್ಲ. ಅವರ ಮನೆಯಲ್ಲಿ ಸಹೋದರಿ ಜತೆಯಲ್ಲಿ ಇದ್ದಾರೆ. ದುಡಿಯಬೇಕಾದ ಜೀವ ಆಸ್ಪತ್ರೆ ಯಲ್ಲಿ ಬೆಡ್ ನಲ್ಲಿ ಮಲಗಿದ್ದು ಅವರಿಗೆ ಹಣ ಹೊಂದಿಸಲು ಕಷ್ಟವಾಗಿದೆ. ಇವರ ಕಷ್ಟಕ್ಕೆ ಸ್ಪಂದಿಸಿರುವ ಸೇವಾ ಸಂಘವು ಸಹಾಯಧನವನ್ನು ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments