ಸಹಯೋಗದ ಸ್ವಾತಂತ್ರ್ಯವಾಗಿ ಶತಕದತ್ತ ಸಾಗೋಣ : ಡಾ ನೆಗಳಗುಳಿ

ಮಂಗಳೂರು ನಂತೂರಿನಲ್ಲಿರುವ ಸಂದೇಶ ಪ್ರತಿಷ್ಠಾನ ದಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಆಚರಣೆಯ ಶುಭಾವಸರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂದೇಶ ಪ್ರತಿಷ್ಠಾನದ ಟ್ರಸ್ಟಿ ರೋಯ್ ಕಾಸ್ತೆಲಿನೊ ಧ್ವಜವನ್ನು ಅರಳಿಸಿದರು.ಪತ್ರಕರ್ತರಾದ ರೇಮಂಡ್ ಡಿಕೂನಾ ತಾಕೊಡೆ ಧ್ವಜ ವಂದನೆ ನೆರವೇರಿಸಿದರು ಸಂದೇಶ ಪ್ರತಿಷ್ಠಾನ ನಿರ್ದೇಶಕರಾದ ಫಾ ಸುದೀಪ್ ಪೌಲ್ ಎಲ್ಲರನ್ನೂ ಸ್ವಾಗತಿಸಿದರು.ರಾಷ್ಟ್ರ ಗೀತೆಯ ನಂತರಮುಖ್ಯ ಅತಿಥಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ಚಿಕಿತ್ಸಾ ತಜ್ಞ,ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿ ಯವರು ಸ್ವಾತಂತ್ರ್ಯ ಸಂದೇಶ ನೀಡಿದರು.

ಅವರು ಮಾತನಾಡುತ್ತಾ ಗೂಡಿನೊಳಗಿನ‌ಹಕ್ಕಿ ತಾನಾಗಿ ಕೊಕ್ಕಿಂದ ಕುಕ್ಕಿ ಹೊರ ಬಂದು ಬಂಧಿಸಿದವನ ತಲೆಗೆ ಕುಕ್ಕಿ ಆತನನ್ನು ಓಡಿಸಿ ಸ್ವಚ್ಛಂದ ಹಾರಾಟ ಮಾಡಿದಂತೆ ಪಡೆದ ಈ ಸ್ವಾತಂತ್ರ್ಯ ದ ಸದುಪಯೋಗದ ಅಗತ್ಯವನ್ನು ಒತ್ತಿ ಹೇಳಿದರು.ಜಾತಿ ಮತ ಧರ್ಮ ದ್ವೇಷ ರಹಿತ ಸರ್ವ ಧರ್ಮ ಸಮನ್ವಯದ ಅಗತ್ಯವನ್ನು ಅವರು ವಿಶಧೀಕರಿಸಿದರು.ಬಳಿಕ ಅತಿಥಿಗಳಿಗೆ ಶಾಲು ಹಾಕಿ ಗೌರವ ಸಹಿತವಾಗಿ ಸಮಾರಂಭ ಮುಕ್ತಾಯವಾಯಿತು.ಕಥಾಬಿಂದು ಪ್ರತಿಷ್ಠಾನ ದ ಶ್ರೀ ಪ್ರದೀಪ್ ಕುಮಾರ ಪಿ.ವಿ. ಕುಂಜತ್ತ ಬೈಲ್ ಮತ್ತಿತರರು ಉಪಸ್ಥಿತರಿದ್ದರು.

essan

Related Posts

Leave a Reply

Your email address will not be published.