HomeFresh Newsಆಫ್ರಿಕಾದ ಪಶ್ಚಿಮ ಭಾಗದಲ್ಲಿ ಬೆಳೆಯುವ ಸಪೋ ಹಣ್ಣು

ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಬೆಳೆಯುವ ಸಪೋ ಹಣ್ಣು

ಬಟರ್ ಫ್ರುಟ್, ಬುಶ್ ಬಟರ್ ಫ್ರುಟ್, ಆಫ್ರಿಕನ್ ಪೀರ್ ಎಂದೆಲ್ಲ ಕರೆಯುವ ಸಫೋ ಹಣ್ಣು ಗುಣವಿದ್ದೂ ಹೆಚ್ಚು ಬೆಂಬಲ ಪಡೆಯದ ಹಣ್ಣಾಗಿದೆ.

ಸಫೋ ಹಣ್ಣು ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಹಾಗೂ ಮಧ್ಯ ಆಫ್ರಿಕಾದಲ್ಲಿ ಬೆಳೆಯುವ ಹಣ್ಣಾಗಿದೆ. ಉಷ್ಣವಲಯದ ಸದಾ ಹಸಿರು ಮರದ ಫಲವಿದು. ಹಿಂದೆ ಕಾಡಿನ ಪೊದೆಯ ಹಣ್ಣಾಗಿದ್ದ ಇದು ಈ ಶತಮಾನದಲ್ಲಿ ರೈತರು ಸ್ವಲ್ಪ ಮಟ್ಟಿಗೆ ಬೆಳೆಯುವ ಹಣ್ಣಾಗಿದೆ. ಆಫ್ರಿಕಾದ ಕೆಲವು ಪ್ರದೇಶಗಳ ರೈತರ ಸಹ ಆದಾಯ ಮೂಲವಾದ ಈ ಹಣ್ಣು ಹೆಚ್ಚು ಬೆಳೆ ಪ್ರಚಾರ ಪಡೆದಿಲ್ಲ.

ಕಾಂಗೋ, ಅಂಗೋಲ, ಗಬೋನ್, ನೈಜೀರಿಯಾ ಮೊದಲಾದ ದೇಶಗಳಲ್ಲಿ ಬೆಳೆಯುವ ಹಣ್ಣು ಇದು. ೪ರಿಂದ ೧೨ ಸೆಂಟಿಮೀಟರ್ ದೊಡ್ಡ ಹಣ್ಣು ನೀಲಿ ನೇರಳೆ ಬಣ್ಣದಲ್ಲಿ ಇರುತ್ತದೆ. ಒಳ ತಿರುಳು ತಿಳಿಹಸಿರು ಬಣ್ಣದ್ದಾಗಿರುತ್ತದೆ. ತಿರುಳು ಬೆಣ್ಣೆಯಂತೆ ಇರುವುದರಿಂದ ನೇರ ತಿನ್ನುವರು; ಸಿಹಿ ಹುಳಿ ರುಚಿ. ಇಡೀ ಹಣ್ಣನ್ನು ಉಪ್ಪು ಹಾಕಿ ಬೇಯಿಸಿ ಇಲ್ಲವೇ ಎಣ್ಣೆಯಲ್ಲಿ ಹುರಿದು ಸೇವಿಸುವರು. ತಿರುಳು ೪೦ ಶೇಕಡಾ ಎಣ್ಣೆಯ ಅಂಶ ಹೊಂದಿದೆ.

ಪೊಟಾಸಿಯಂ, ತಾಮ್ರಾಂಶ, ಕಬ್ಬಿಣಾಂಶ, ಜೀವಸತ್ವಗಳ ಈ ಹಣ್ಣು ಮಹತ್ವ ಪಡೆಯದಿದ್ದುದು ಅಚ್ಚರಿ ಎನ್ನಲಾಗಿದೆ. ಈ ಹಣ್ಣನ್ನು ಜಾನುವಾರು ಆಹಾರವಾಗಿಯೂ ಬಳಸುತ್ತಾರೆ. ಬೀಜವೂ ತಿನ್ನುವದಾಗಿದೆ. ಈ ಕಿರು ಪೊದೆ ಮರದ ಸೊನೆಯನ್ನು ಬಿಸಿ ಮಾಡಿ ಅಂಟು ಆಗಿ ಬಳಸುವರು.

ವರದಿ: ಕಿನ್ಸಾಸಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments