HomeFresh Newsಶಾಂತಿಯು ದೇಶದ ಅಭಿವೃದ್ಧಿಗೆ ಸಹಕಾರಿ: ಡಾ. ಶಲೀಫ್ ಎ.ಪಿ.

ಶಾಂತಿಯು ದೇಶದ ಅಭಿವೃದ್ಧಿಗೆ ಸಹಕಾರಿ: ಡಾ. ಶಲೀಫ್ ಎ.ಪಿ.

ಉಜರೆ, ಸೆ.27: ಶಾಂತಿಯುತ ಜಗತ್ತಿಗೆ ಉತ್ತೇಜನ ನೀಡುವ ಸಲುವಾಗಿ ವಿಶ್ವಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ 21ರಂದು ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆಯನ್ನು ಆಚರಿಸುತ್ತಿದೆ ಮತ್ತು ಆ ಮೂಲಕ ವಿಶ್ವ ಶಾಂತಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಆಡಳಿತ ಕುಲಸಚಿವೆ ಹಾಗೂ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಶಲೀಫ್ ಎ.ಪಿ. ಹೇಳಿದರು.

ಕಾಲೇಜಿನಲ್ಲಿ ಸೆಪ್ಟೆಂಬರ್ 27ರಂದು ನಡೆದ ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಪೂರ್ವ ಕಾಲದಿಂದಲೂ ಶಾಂತಿಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಪ್ರಸ್ತುತ ಸಂದರ್ಭದಲ್ಲಿಯೂ ಅಂತಾರಾಷ್ಟ್ರೀಯ ಶಾಂತಿಯನ್ನು ಸ್ಥಾಪಿಸಲು ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಶಾಂತಿಯ ಪ್ರಾಮುಖ್ಯದ ಬಗ್ಗೆ ಮಾತನಾಡಿದರು.

ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ನಟರಾಜ್ ಎಚ್.ಕೆ. ಮತ್ತು ಭಾಗ್ಯಶ್ರೀ ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಧನ್ವಿತ ಸ್ವಾಗತಿಸಿ, ಸುಚಿತ ಧನ್ಯವಾದ ಸಮರ್ಪಿಸಿದರು. ನಿಶಾ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments