ಸಂಘಪರಿವಾರ ಪ್ರೇರಿತ ಗೂಂಡಾಗಿರಿ ವಿರುದ್ಧ ಡಿವೈಎಫ್‍ಐ ಪ್ರತಿಭಟನೆ
ಉಳ್ಳಾಲ: ತುಳುನಾಡಿನ ಯುವಕರ ತಲೆಗೆ ಕೋಮು ವಿಷ ಬೀಜ ಬಿತ್ತಿಸಿ ಹೆಣವಾಗಿಸಲಾಗುತ್ತಿದೆ. ಧಾರ್ಮಿಕ ಪೆÇಲೀಸ್ ಗಿರಿ ನಿರಂತರವಾಗಿ ನಡೆದರೂ ಪೊಲೀಸ್ರು ಆರ್ ಎಸ್ ಎಸ್ ಏಜೆಂಟರುಗಳಾಗಿ ವರ್ತಿಸುತ್ತಿದ್ದಾರೆ ಎಂದು ಡಿವೈಎಫ್‍ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದರು.
ಅವರು ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಯಲ್ಲಿ ನಡೆಯುತ್ತಿರುವ ಸಂಘಪರಿವಾರ ಪ್ರೇರಿತ ಗೂಂಡಾಗಿರಿ ವಿರುದ್ಧ ಜನಾಕ್ರೋಶ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಅಮಾಯಕರ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ಬಸ್ಸಿನಲ್ಲಿ ಮಹಿಳೆಯೊಬ್ಬರ ಬ್ಯಾಗ್ ಪಡೆದುಕೊಂಡಿದ್ದಕ್ಕೆ ಮುಲ್ಲರಪಟ್ನ ನಿವಾಸಿ ಇಸಾಕ್ ಎಂಬವರಿಗೆ ಬೆನ್ನಲ್ಲಿ ಜಾಗವಿಲ್ಲದಂತೆ ಹಲ್ಲೆ ನಡೆಸಲಾಗುತ್ತದೆ. ಸಂಪರಿವಾರದ ಗೂಂಡಾಗಳ ಮೇಲೆ ಕ್ರಮಕೈಗೊಳ್ಳಬೇಕಾದ
ಪೊಲೀಸ್ರು , ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಆರೋಪಿಗಳು ಅಂದು ಸಂಜೆಯೇ ಬೇಲ್ ಪಡೆದುಕೊಂಡು ಹೊರಬರುವಂತಹ ಸ್ಥಿತಿ. ಉಳ್ಳಾಲದಲ್ಲಿ ಮರಳು ಮಾಫಿಯಾ, ಜುಗಾರಿ ಮಾಫಿಯಾ, ಡಾಮಾರು ಮಾಫಿಯಾ, ಪೆಟ್ರೋಲ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದ್ದರೂ, ಪೊಲೀಸ್ರು ಚಕಾರವೆತ್ತುತ್ತಿಲ್ಲ. ಆದರೆ ಪ್ರತಿಭಟನೆಗೆ ಅನುಮತಿಯನ್ನು ಕೇಳಿದರೆ ನಿರಾಕರಿಸುತ್ತಿರುವುದು ದುರಂತ.
ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ವಿಶ್ವಸಂಸ್ಥೆ ವರದಿಯ ಪ್ರಕಾರ ಹಿಂಸೆಯಲ್ಲಿ ದೇಶ ಅಪಘಾನಿಸ್ತಾನ, ಪಾಕಿಸ್ತಾನಕ್ಕಿಂತಲೂ ಕೆಳಗಿದೆ.ರಾಜಕೀಯ ಕಾಳಗಕ್ಕಾಗಿ ಅಲ್ಪಸಂಖ್ಯಾತ ರ ಮೇಲೆ ದಾಳಿಗಳು ನಡೆಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ವಕೀಲ ನಿತಿನ್ ಕುಮಾರ್, ಡಿವೈಎಫ್ ಐ ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ, ಸಿಪಿಐಎಂ ಉಳ್ಳಾಲ ವಲಯ ಮಾಜಿ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಜಿಲ್ಲಾ ಕಾರ್ಯಕಾರಿ ಸಮಿತಿಯ ಪದ್ಮಾವತಿ ಎಸ್. ಶೆಟ್ಟಿ, ಸಿಪಿಥೈಎಂ ಜಿಲ್ಲಾ ಕಾರ್ಯದರ್ಶಿ
ಜಯಂತ್ ನಾಯ್ಕ್ , ಸುನಿಲ್ ತೇವುಲ, ಎಸ್ ಎಫ್ ಐ ನ ರೇವಂತ್ ಕದ್ರಿ, ಹರೇಕಳ ಗ್ರಾ.ಪಂ ಸದಸ್ಯ ಅಶ್ರಫ್ ಹರೇಕಳ , ರಝಾಕ್ ಮೊಂಟೆಪದವು, ಆಸಿಫ್ ಪಾವೂರು, ಜನಾರ್ದನ ಹರೇಕಳ, ರಿಝ್ವಾನ್ ಹರೇಕಳ, ಬಶೀರ್ ಹರೇಕಳ ಉಪಸ್ಥಿತರಿದ್ದರು.