HomeFresh Newsಬೈಂದೂರಿನಿಂದ ಬೆಂಗಳೂರು–ಮಂಗಳೂರು ಮಾರ್ಗಕ್ಕೆ ‘ಶಾಂತಾ ಟ್ರಾವೆಲ್ಸ್’ ಚಾಲನೆ

ಬೈಂದೂರಿನಿಂದ ಬೆಂಗಳೂರು–ಮಂಗಳೂರು ಮಾರ್ಗಕ್ಕೆ ‘ಶಾಂತಾ ಟ್ರಾವೆಲ್ಸ್’ ಚಾಲನೆ

ಬೈಂದೂರು: ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಸುರಕ್ಷಿತ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ಬೈಂದೂರಿನಿಂದ ‘ಶಾಂತಾ ಟ್ರಾವೆಲ್ಸ್’ ನೂತನ ಬಸ್ ಸೇವೆಗೆ ಚಾಲನೆ ದೊರೆಯಿತು.

ಬೈಂದೂರು–ಕುಂದಾಪುರ–ಉಡುಪಿ–ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ಬಸ್ ಸೇವೆ ಸಂಚರಿಸಲಿದೆ.
ಆರಾಮದಾಯಕ ಸ್ಲೀಪರ್ ಕೋಚ್, ಎಸಿ, ಶೌಚಾಲಯ, ವೈ-ಫೈ, ಸಿಸಿ ಕ್ಯಾಮೆರಾ, ಚಾರ್ಜಿಂಗ್ ಪಾಯಿಂಟ್, ಹೆಚ್ಚಿನ ಲಗೇಜ್ ಸ್ಥಳಾವಕಾಶ ಸೇರಿದಂತೆ ಹಲವು ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ. ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಲಾಗಿದ್ದು, ಅನುಭವಿ ಇಬ್ಬರು ಚಾಲಕರು ಮತ್ತು ಹಾಗೂ ಸಿಬ್ಬಂದಿಯ ಸೇವೆ ಇರಲಿದೆ.
ಈಗಾಗಲೇ ಗೋವಾ ಹಾಗೂ ಬೆಂಗಳೂರಿಗೆ ಇವರ ಮಾಲೀಕತ್ವದ ನಾಲ್ಕು ಬಸ್‌ಗಳು ಸಂಚರಿಸುತ್ತಿದ್ದು, ಈ ಹಿಂದೆ ಕುಂದಾಪುರದಲ್ಲಿ ‘ಕೆ.ಜಿ. ಮೋಟರ್ ಸರ್ವಿಸಸ್’ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಇವರ ಬಸ್ ಬೆಂಗಳೂರಿನ ವಿವಿಧ ಕಡೆಯಲ್ಲಿ ಸಂಚರಿಸಲಿದೆ

ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ್ ಗಂಟೆಹೊಳೆ ಅವರು ಹಸಿರು ನಿಶಾನೆ ತೋರಿಸಿ ಮಾತನಾಡಿ, ಬೈಂದೂರಿನಿಂದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುವ ಈ ಸೇವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶುಭ ಹಾರೈಸಿದರು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಸ್ವಂತ ಊರಿನಿಂದಲೇ ಸಾರಿಗೆ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ವಿಚಾರವಾಗಿದ್ದು, ಶಾಂತಾ ಟ್ರಾವೆಲ್ಸ್ ಉತ್ತಮ ಸೇವೆಯ ಮೂಲಕ ಜನರ ವಿಶ್ವಾಸ ಗಳಿಸಲಿ ಎಂದು ಶುಭ ಹಾರೈಸಿದರು.
ಸಾರಿಗೆ ಉದ್ಯಮದಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿರುವ ಕೆ.ಜಿ. ಮಂಜುನಾಥ್ ಶೇರಿಗಾರ್ ಅವರ ಮಾಲೀಕತ್ವದಲ್ಲಿ ಶಾಂತಾ ಟ್ರಾವೆಲ್ಸ್ ಆರಂಭಗೊಂಡಿದೆ ಎಂದರು

ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ 📞 7057409677 / 9309549635

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments