HomeFresh Newsಚಪ್ಪಲಿ ಕಳೆದುಕೊಂಡ ಯುವಕನಿಂದ 112ಕ್ಕೆ ಕರೆ

ಚಪ್ಪಲಿ ಕಳೆದುಕೊಂಡ ಯುವಕನಿಂದ 112ಕ್ಕೆ ಕರೆ

ನಗರದ ಸಭಾಂಗಣದಲ್ಲಿ ಯುವಕನೊಬ್ಬ ಹೊರಗೆ ಬಿಟ್ಟಿದ್ದ ಚಪ್ಪಲಿ ನಾಪತ್ತೆಯಾಗಿದ್ದು ಇದಕ್ಕಾಗಿ 112 ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿಯಿಸಿದ ಘಟನೆ ನಡೆದಿದೆ.

ಶರವು ದೇವಸ್ಥಾನದ ಸಮೀಪದ ಸಭಾಂಗಣಕ್ಕೆ ಆಗಮಿಸಿದ್ದ ಯುವಕ ಚಪ್ಪಲಿಯನ್ನು ಹೊರಗೆ ಬಿಟ್ಟಿದ್ದು ವಾಪಾಸ್ ಬಂದಾಗ ಚಪ್ಪಲಿ ಇಲ್ಲದಿರುವುದನ್ನು ಕಂಡು 112 ನಂಬರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ. ಈ ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದಿತ್ತು. ಇದನ್ನು ನೋಡಿ ಪೊಲೀಸರೂ ಸುಸ್ತು ಬಿದ್ದಿದ್ದಾರೆ. ಆದರೆ ದೂರನ್ನು ನಿರ್ಲಕ್ಷಿಸುವ ಹಾಗಿಲ್ಲವಲ್ಲ. ಹೀಗಾಗಿ ಕರ್ತವ್ಯದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಯುವಕ ಚಪ್ಪಲಿ ಕಳವಾಗಿರುವ ವಿಷಯ ಅವರಿಗೆ ತಿಳಿಸಿದ್ದಾನೆ.

ಪೊಲೀಸರು ಕೂಡ ಚಪ್ಪಲಿಗಾಗಿ ಹುಡುಕಾಡಿದ್ದಾರೆ. ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟ ದೃಶ್ಯಾವಳಿಗಳನ್ನು ಕೂಡಾ ಪರಿಶೀಲಿಸಿದ್ದಾರೆ. ಆಗ ಸಭಾಂಗಣಕ್ಕೆ ಮಾರುಕಟ್ಟೆಯಿಂದ ಸಾಮಗ್ರಿ ಹಾಕಲು ಬಂದಿದ್ದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಠಾಣೆಗೆ ಬಂದು ದೂರು ನೀಡುವಂತೆ ಯುವಕನಲ್ಲಿ ಪೊಲೀಸರು ತಿಳಿಸಿದ್ದು, ಯುವಕ ದೂರು ನೀಡದೆ ತೆರಳಿದ್ದಾನೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments