ಪೊಲೀಸರಿಗೆ ಬಂದೂಕು ತೋರಿಸಿ ಆಕ್ರಮಣಕ್ಕೆ ಯತ್ನಿಸಿದ
ಆರೋಪಿಗಳು

ಪೊಲೀಸರಿಗೆ ಬಂದೂಕು ತೋರಿಸಿ ಆಕ್ರಮಣ ಗೈಯಲು ಯತ್ನಿಸಿದ ಹಾಗೂ ಲಾರಿಯೊಂದನ್ನು ಅಪಹರಣಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಹಾಗೂ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಮೀಯಪದವು ನಿವಾಸಿಗಳಾದ ರಹಿಂ ಹಾಗೂ ಲತೀಫ್ ಬಂಧಿತ ಆರೋಪಿಗಳು. ರಹೀಂ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ ಲತೀಫ್ ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಇವರ ವಿರುದ್ಧ ಕೇರಳ ಹಾಗೂ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಜೇಶ್ವರ ಸರ್ಕಲ್ ಇನ್ಸ್ ಪೆಕ್ಟರ್ ಟಿ ಎ ರಾಜೇಶ್ ತಿರುವತ್ತ್ ಪೀಡಿಗಯಿಲ್ ಹಾಗೂ ಎಸ್ಮೈ ಎನ್ ಅನ್ಸಾರ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Related Posts

Leave a Reply

Your email address will not be published.