ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 7ನೇ ದಿನ ಅತಿರುದ್ರ ಮಹಾಯಾಗದ ಸಭಾ ಕಾರ್ಯಕ್ರಮ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 28, 2023 ರ ಮಂಗಳವಾರದಂದು ನಡೆದ ಅತಿರುದ್ರ ಮಹಾಯಾಗದ ಏಳನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಹೆಯ ಸಹ ಉಪಕುಲಪತಿಗಳಾದ ಡಾ. ಶರತ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಎಂ ಐ ಟಿ ಕಾಲೇಜಿನ ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ್ ಭಟ್, ‘ನಾವು ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನ ಜನರ ಮೇಲಿನ ಕಾಳಜಿಯಿಂದ ಕೆಲಸ ಮಾಡಬೇಕು. ಸಮಾಜದಲ್ಲಿ ಯಾರೊಬ್ಬರು ಕೂಡ ಕಮ್ಮಿ ಬೆಲೆಯವರು ಮತ್ತು ಜಾಸ್ತಿ ಬೆಲೆಯವರು ಎಂದಿಲ್ಲ. ನಾವೆಲ್ಲಾ ಒಟ್ಟಾದಾಗ ನಮ್ಮ ಶಕ್ತಿ ಜಾಸ್ತಿಯಾಗುತ್ತದೆ. ಆದ್ದರಿಂದ ನಾವೆಲ್ಲಾ ಒಟ್ಟಾಗೋಣ, ನಮ್ಮ ಶಕ್ತಿಯನ್ನು ಜಗತ್ತಿಗೆ ತೋರಿಸೋಣ’ ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಡುಪಿ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್, ‘ಸನಾತನ ಧರ್ಮದಲ್ಲಿ ಅತಿರುದ್ರ ಮಹಾಯಾಗಕ್ಕೆ ಮಹತ್ತರ ಸ್ಥಾನವನ್ನು ನೀಡಿದ್ದಾರೆ. ಇಂತಹ ಯಾಗಗಳು ಮುಂದಿನ ದಿನಗಳಲ್ಲಿಯೂ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿ ಮತ್ತು ಜಗತ್ತಿಗೆ ದೇವರು ಒಳ್ಳೆಯದನ್ನು ಕರುಣಿಸಲಿ’ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ನ ವೈದ್ಯರಾದ ಡಾ. ನಿತೇಶ್ ಶೆಟ್ಟಿ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ಆದಿ ಭಸ್ಮೇಶ್ವರಿ ಭಜನಾ ಮಂಡಳಿ ಮರಾಠಿ ಸಮಾಜದ ಹತ್ತು ಸಮಸ್ತರ ಕೊಡುವಿಕೆಯ ಶ್ರದ್ಧಾ ಕೇಂದ್ರದ ಸೋಮಯ್ಯ ನಾಯ್ಕ, ಭಸ್ಮೇಶ್ವರಿ ಭಜನಾ ಮಂಡಳಿಯ ಕುಶ, ಕೋಡಿ ಭಜನಾ ತಂಡದ ಬಾಬು ನಾಯ್ಕ, ಉಡುಪಿಯ ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನದ ಟಿ. ವಿಶ್ವನಾಥ ಶಾನುಭೋಗ್, ಮಣಿಪಾಲ ಮಾಹೆಯ ಜೈ ವಿಠಲ, ಸಮಾಜ ಸೇವಕರಾದ ಭುವನ್ ಪ್ರಸಾದ್ ಹೆಗ್ಡೆ, ಉಡುಪಿಯ ರಾಮಕ್ಷತ್ರೀಯ ಸಮಾಜದ ತಾಲೂಕು ಅಧ್ಯಕ್ಷರಾದ ಕೆ. ಟಿ. ನಾಯ್ಕ, ಉಪನ್ಯಾಸ ನೀಡಲಿರುವ ಪಾಟೀಲ್ ಕ್ಲಾತ್ ಸ್ಟೋರ್ಸ್ ನ ಗಣೇಶ್ ಪಾಟೀಲ್, ಶ್ರೀ ಉಮಾಮಹೇಶ್ವರ ದೇವಸ್ಥಾನದ ಟ್ರಸ್ಟಿಗಳಾದ ಸುಭಾಕರ ಸಾಮಂತ್, ದಿನೇಶ್ ಪ್ರಭು, ದಿನೇಶ್ ಶ್ರೀಧರ ಸಾಮಂತ, ಅಶೋಕ್ ಸಾಮಂತ, ಜಿ. ಕೃಷ್ಣರಾಯ ಪಾಟೀಲ್, ಶ್ರೀ ಪ್ರಭು ಉಪಸ್ಥಿತರಿದ್ದರು.

ನಂತರ ಗಣೇಶ್ ಪಾಟೀಲ್ ಅವರಿಂದ ಧಾರ್ಮಿಕ ಉಪನ್ಯಾಸ, ವಿದುಷಿ ರೂಪಾ ಕಿರಣ್, ಹಾಂಕಾಂಗ್ ಅವರಿಂದ ಭರತನಾಟ್ಯ, ಮಂಗಳೂರಿನ ಸಾಯಿ ಶಕ್ತಿ ಕಲಾ ತಂಡದ ಪ್ರಸ್ತುತಿಯಲ್ಲಿ “ಬೊಳ್ಳಿ ಮಲೆತ ಶಿವ ಶಕ್ತಿಲು” ತುಳು ಪೌರಾಣಿಕ ನಾಟಕ ಜರುಗಿತು.