ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 15 ನೆಯ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಮಹಾ ಶಿವರಾತ್ರಿ ಕಾರ್ಯಕ್ರಮ

ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 15 ನೆಯ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ ಹಾಗೂ ಮಹಾ ಶಿವರಾತ್ರಿ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು.
ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಶಿಕಾರಿಪುರ ಕೃಷ್ಣಮೂರ್ತಿ, ಉದಯ ಕುಮಾರ್, ರಘುರಾಮ ರಾವ್ ಮತ್ತು ತಂಡದವರಿಂದ ರುದ್ರ ಪಠನ, ಉರ್ವ ಶ್ರೀ ಮಾರಿಯಮ್ಮ ಕ್ಷೇತ್ರ ಪಾರಾಯಣ ಬಳಗದವರಿಂದ ಸಾಮೂಹಿಕ ಕುಂಕುಮಾರ್ಚನೆ, ಶ್ರೀ ಲಲಿತಾ ಸಹಸ್ರನಾಮಾರ್ಚನೆ ಜರುಗಿತು. ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಆಶೀರ್ವಚನವಿತ್ತು “ಆದಿಗುರು ದಕ್ಷಿಣಾ ಮೂರ್ತಿಯವರಿಂದ ಬಂದ ಅಪರ ವಿದ್ಯೆಯಾದ ಆಧ್ಯಾತ್ಮಿಕ ವಿದ್ಯೆಯನ್ನು ಜಗದ್ಗುರು ಆದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಂದ ಗಳಿಸುವ ಹಾಗೂ ಅನುಭವಿಸುವ ಭಾಗ್ಯ ನಮ್ಮದಾಗಿದೆ ಎಂದರು.

ಶಿವ ಶಕ್ತಿ ಐಕ್ಯ ರೂಪಿಣ್ಯೈ ನಮಃ- ಪ್ರಕೃತಿ ಮತ್ತು ಪುರುಷ ಐಕ್ಯತೆಯ ಮೂಲ ಮಂತ್ರ.ಸೂರ್ಯೋದಯ ಆದ ತಕ್ಷಣ ಅಂಧಕಾರ ಹೇಗೆ ಇಲ್ಲದಂತೆ ಆಗುತ್ತದೋ,ಸಂಪೂರ್ಣವಾದ ವಿವೇಕ ಮತ್ತು ವೈರಾಗ್ಯದಿಂದ ತಮಸ್ಸಿನಿಂದ ಮೂಡಿಬರುವ ಅಂಧಕಾರವು ಜ್ಞಾನವೆಂಬ ಬೆಳಕಿನಿಂದ ದೂರವಾಗುತ್ತದೆ.ನಮ್ಮ ಆಲೋಚನೆಯಲ್ಲಿ, ನಮ್ಮ ಕೃತಿಯಲ್ಲಿ ಇದು ಪ್ರತಿಬಿಂಬಿಸುತ್ತದೆ ಹಾಗೂ ಬೆಳಕು ಚೆಲ್ಲುತ್ತದೆ ಎಂಬುದು ಶಿವರಾತ್ರಿಯ ತತ್ವವಾಗಿದೆ.
ಮಂಗಳಕರವಾದ, ಶ್ರೇಯಸ್ಕರವಾದ ಜೀವನವು ಭಗವಂತನ ನಿತ್ಯ ನಾಮಸ್ಮರಣೆ ಮತ್ತು ನಿಸ್ವಾರ್ಥ ಪ್ರೇಮದಿಂದ ನಿಸ್ಸಂದೇಹವಾಗಿ ಬರುವಂಥದ್ದು ಎಂದರು”.ಬ್ರಹ್ಮಚಾರಿ ವೇದ ವೇದ್ಯಾಮೃತ ಚೈತನ್ಯ ಮತ್ತು ಬ್ರಹ್ಮಚಾರಿ ರತೀಶ್ ರವರು ಮಹಾಗಣಪತಿ ಹೋಮ ,ಮಹಾ ಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ ,ನವಕ ಕಲಶಾಭಿಷೇಕ ಮೊದಲಾದ ಪೂಜಾ ವಿಧಾನಗಳನ್ನು ನೆರವೇರಿಸಿದರು.ಜಯಪ್ರಕಾಶ್ ಪೂಜೆಯಲ್ಲಿ ಸಹಕರಿಸಿದರು.

ಶ್ರೀ ನಿಧಿ ಅಭ್ಯಂಕರ್ ಮತ್ತು ಮಹಾದೇವ ರಾನಡೆ ಪುರುಷ ಸೂಕ್ತ ಪಠನ ಮಾಡಿದರು.ರಾತ್ರಿ ವೇಳೆ ಭಾರತೀಯ ಆರಾಧನಾ ಕಲೆಗಳಲ್ಲೊಂದಾದ ನೃತ್ಯ ಭಜನೆಯು ವಿವಿಧ ಖ್ಯಾತ ತಂಡಗಳಿಂದ ನೆರವೇರಿದ್ದು ಅತ್ಯಾಕರ್ಷಕವೆನಿಸಿತು.
ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ,ಡಾ.ಸನತ್ ಹೆಗ್ಡೆ,ಶ್ರೀಮತಿ ಶ್ರುತಿ ಹೆಗ್ಡೆ, ಡಾ.ವಸಂತಕುಮಾರ್ ಪೆರ್ಲ,ಸುರೇಶ್ ಅಮೀನ್,ಸದಾಶಿವ ಭಟ್,ಪ್ರವೀಣ್ ಶಬರೀಶ್,ಡಾ.ಸುಚಿತ್ರಾ ರಾವ್, ಮುರಳೀಧರ್ ಶೆಟ್ಟಿ, ಕೃಷ್ಣಶೆಟ್ಟಿ, ಯತೀಶ್ ಬೈಕಂಪಾಡಿ,ಕಾರವಾರ, ಕುಂದಾಪುರ, ಉಡುಪಿ ,ಮಂಗಳೂರಿನ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು..