ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ‘ಅತಿರುದ್ರ ಮಹಾಯಾಗ’ದ ಸಲುವಾಗಿ ಶಿವಪಾಡಿಯ ಸಾನಿಧ್ಯದಲ್ಲಿ ಅನೇಕ ಕಾರ್ಯಕ್ರಮಗಳೊಂದಿಗೆ ಜೋರಾಗಿ ತಯಾರಿಗಳು ಕೂಡ ಸಾಗುತ್ತ ಇವೆ. ಮಹಾಯಾಗದ ಪ್ರಯುಕ್ತ ಫೆಬ್ರವರಿ 20, 2023 ರ ಸೋಮವಾರದಂದು ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನಕ್ಕೆ ನಟ ರಕ್ಷಿತ್ ಶೆಟ್ಟಿ ಅವರು ಆಗಮಿಸಿ, ದೇಗುಲದಲ್ಲಿ ನಡೆಯುತ್ತಿರುವ ಸಕಲ ತಯಾರಿಗಳನ್ನು ವೀಕ್ಷಿಸಿ, ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿ ತಮ್ಮ ಬಿಡುವಿನ ಸಮಯವನ್ನು ಕಳೆದರು. ಈ ಸಂದರ್ಭದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ಅವರ ಜೊತೆಯಿದ್ದರು.



