ಮೂಡುಬಿದಿರೆ: ಶ್ರೀ ಜೈನ ಮಠ ಮೂಡುಬಿದಿರೆಯ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ಪ್ರತಿವರ್ಷದಂತೆ 26ನೇ ವರ್ಷದ ಚಾತುರ್ಮಾಸ ಕಲಶ ಸ್ಥಾಪನೆ ನೆರವೇರಿಸಿದರು. ಬೆಳಿಗ್ಗೆ ಕಲಶ ಸ್ಥಾಪನೆ ನಡೆಯಿತು.
ನಂತರ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ, ಗಣಧರ ಪೂಜೆ ಹಾಗೂ ಕುಷ್ಮಾಂಡಿ ದೇವಿ ಪೂಜೆ ಸಲ್ಲಿಸಲಾಯಿತು.
ಮಧ್ಯಾಹ್ನ ಯೋಗಿ ಭಕ್ತಿ, ಪಂಚ ಗುರು ಭಕ್ತಿ, ಸಿದ್ಧ ಭಕ್ತಿ ಹಾಗೂ ಆಚಾರ್ಯ ಭಕ್ತಿ ಪಠಿಸಲಾಯಿತು. ಬಳಿಕ ದಿಶಾ ಬಂಧನ ನೆರವೇರಿಸಿ, ಪ್ರತಿಯೊಂದು ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ದಿಶಾ ಬಂಧನ ಬದಲಾವಣೆ ಮಾಡುವ ಸಂಕಲ್ಪದೊಂದಿಗೆ ಭಾದ್ರಪದ ಹುಣ್ಣಿಮೆಯವರೆಗೆ ವ್ರತ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಟ್ಟದ ಪುರೋಹಿತ ಪಾರ್ಶ್ವನಾಥ ಇಂದ್ರರು ಪೂಜಾ ವಿಧಿವಿಧಾನ ನೆರವೇರಿಸಿದರು. ಮಹಾರಾಷ್ಟ್ರದ ಜೈಪುರದಿಂದ ಆಗಮಿಸಿದ್ದ ಭಕ್ತರು ಉಪಸ್ಥಿತರಿದ್ದರು.


