HomeFresh Newsಮೆಸ್ಪಿಲಸ್ ಜರ್ಮಾನಿಕಾ ಹಣ್ಣು | ಹಣ್ಣಾಗಲು ಬಹು ಕಾಲ ಬೇಡುವ ಹಣ್ಣು | ಗಟ್ಟಿ ಹಣ್ಣು...

ಮೆಸ್ಪಿಲಸ್ ಜರ್ಮಾನಿಕಾ ಹಣ್ಣು | ಹಣ್ಣಾಗಲು ಬಹು ಕಾಲ ಬೇಡುವ ಹಣ್ಣು | ಗಟ್ಟಿ ಹಣ್ಣು ಕಹಿ ಹೋಗಿ ಬೆಣ್ಣೆ ಸಿಹಿ ಹುಳಿಯ ವಿಶೇಷ

ರೋಮನರ ಕಾಲದಿಂದಲೂ ಯೂರೋಪಿನಲ್ಲಿ ಇರುವ ಮೆಸ್ಪಿಲಸ್ ಜರ್ಮಾನಿಕಾ ಹಣ್ಣು ತನ್ನ ಗಟ್ಟಿತನದಿಂದ ಈಗೆಲ್ಲ ಜನಪ್ರಿಯತೆ ಕಳೆದುಕೊಂಡಿದೆ.

ಎಷ್ಟು ಕಡೆಗಣಿಸಲ್ಪಟ್ಟರೂ ಬಳಸುವವರು ಇದ್ದಾರೆ. ಈ ಹಣ್ಣಿನ ಕೆಳ ಭಾಗದ ಆಕಾರವು ವಿಚಿತ್ರ ಅರೆ ಮುಗಿದ ಹಣ್ಣಿನಂತೆ, ಮುಗಿಯದೆ ಕೆತ್ತನೆಯಂತೆ ಕಾಣಿಸುತ್ತದೆ.

ಇದು ಗಟ್ಟಿ ಕಾಯಿ, ತಿನ್ನಲು ಹೋದರೆ ತುಸು ಕಹಿ ಕಹಿ. ಹಣ್ಣಾದಾಗ ಮೃದುವಾಗುತ್ತದೆ, ಒಳ ತಿರುಳು ಬೆಣ್ಣೆಯಂತೆ ಆಗುತ್ತದೆ ಹಾಗೂ ರುಚಿಯು ಸಿಹಿ ಹುಳಿ ಇರುತ್ತದೆ.

ಆದರೆ ಗಟ್ಟಿ ಕಾಯಿ ಹಣ್ಣಾಗಲು ತಿಂಗಳುಗಟ್ಟಲೆ ಬೇಕು. ತಂಪಾದ, ಕತ್ತಲೆಯ, ಗಾಳಿ ಓಡಾಡುವಲ್ಲಿ ಇಟ್ಟರೆ ನಿಧಾನವಾಗಿ ಇದು ಮೃದು ಹಣ್ಣಾಗುತ್ತದೆ.

ಬಂಗಾರಗಂದು ಬಣ್ಣದ ಕಾಯಿ ತಿನ್ನಲಾಗದು. ಹಣ್ಣಾದಾಗ ದಾಲ್ಚಿನ್ಬಿ ಪರಿಮಳದ ವೆನಿಲಾ ರುಚಿ ಕೊಡುತ್ತದೆ. ನೇರ ತಿನ್ನುವುದಲ್ಲದೆ ಜಾಮ್, ಜೆಲ್ಲಿ, ಡೆಸರ್ಟ್ ಮೊದಲಾದವುಗಳಲ್ಲಿ ಬಳಸುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments