HomeFresh Newsವಿಟಿಯು ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಎಸ್.ಜೆ.ಇ.ಸಿ ಕರಾಟೆ ತಂಡದ ಗಮನಾರ್ಹಸಾಧನೆ

ವಿಟಿಯು ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಎಸ್.ಜೆ.ಇ.ಸಿ ಕರಾಟೆ ತಂಡದ ಗಮನಾರ್ಹಸಾಧನೆ

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್.ಜೆ.ಇ.ಸಿ), ವಾಮಂಜೂರು, ಮಂಗಳೂರಿನ ವಿದ್ಯಾರ್ಥಿಗಳು ಬೆಂಗಳೂರಿನ ಆರ್.ವಿ.ಸಿ.ಎ ವತಿಯಿಂದ ಸೆಪ್ಟೆಂಬರ್ 11 ಮತ್ತು 12, 2026ರಂದು ಆಯೋಜಿಸಲಾದ ವಿಟಿಯು ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ
ಮಾಡಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪವನ್ನು ಪ್ರದರ್ಶಿಸುವ ಮೂಲಕ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಹಾಗೂ ಸ್ಥಾನಗಳನ್ನು ಪಡೆದುಕೊಂಡರು. ತಂಡಕ್ಕೆ ಕಾಲೇಜಿನ ಪಿಇಡಿ ವನೀಶಾ ರೋಡ್ರಿಗಸ್ ಹಾಗೂ ಸಹಾಯಕ ಪಿಇಡಿ ಸುಧೀರ್ ಅವರು ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳ ಸಾಧನೆಗಳು:
ಭುವಿ ಜಿ. ಎಸ್. – III ಸೆಮಿಸ್ಟರ್ ಎಂಬಿಎ – 55 ಕೆ.ಜಿ.ಗಿಂತ ಕಡಿಮೆ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ
ಕಟಾ ವಿಭಾಗದಲ್ಲಿ ತೃತೀಯ ಸ್ಥಾನ
ರೋನ್ಸಿಯಾ ಗ್ವಿನೆತ್ ಲೋಬೋ – ಪ್ರಥಮ ವರ್ಷದ ಇಸಿಇ – 61 ಕೆ.ಜಿ.ಗಿಂತ ಕಡಿಮೆ ಕುಮಿಟೆ ವಿಭಾಗದಲ್ಲಿ
ಪ್ರಥಮ ಸ್ಥಾನ
ಚಿನ್ಮಯ್ ಕೇಶವ ಪೂಜಾರಿ – ಪ್ರಥಮ ವರ್ಷದ ವಿ.ಎಲ್.ಎಸ್.ಐ – 67 ಕೆ.ಜಿ.ಗಿಂತ ಕಡಿಮೆ ಕುಮಿಟೆ ವಿಭಾಗದಲ್ಲಿ
ದ್ವಿತೀಯ ಸ್ಥಾನ
ಮೊಹಮ್ಮದ್ ಯುಶಾ – ಪ್ರಥಮ ವರ್ಷದ ಸಿ.ಎಸ್.ಇ – 75 ಕೆ.ಜಿ.ಗಿಂತ ಕಡಿಮೆ ಕುಮಿಟೆ ವಿಭಾಗದಲ್ಲಿ ತೃತೀಯ
ಸ್ಥಾನ
ಈ ಗಮನಾರ್ಹ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳು ಹಾಗೂ ಅವರಿಗೆ
ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರನ್ನು ಎಸ್.ಜೆ.ಇ.ಸಿ ಆಡಳಿತ ಮಂಡಳಿ
ಅಭಿನಂದಿಸಿದೆ. ವಿದ್ಯಾರ್ಥಿಗಳ ಈ ಸಾಧನೆಯು ಅವರ ಕಠಿಣ ಪರಿಶ್ರಮ, ಶಿಸ್ತು ಮತ್ತು ಕ್ರೀಡಾ ಮನೋಭಾವಕ್ಕೆ
ಸಾಕ್ಷಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments