HomeFresh Newsಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸುರತ್ಕಲ್ ಯುವಕ ಮೃತ್ಯು

ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸುರತ್ಕಲ್ ಯುವಕ ಮೃತ್ಯು

ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸುರತ್ಕಲ್ ತಡಂಬೈಲ್ ನ ಯುವಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ.ಸೌದಿ ಅರೆಬಿಯಾದ ಅಲ್ಅಸಾ ಎಂಬಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಫಾಝಿಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.ಫಾಝಿಲ್ ಅವರಿಗೆ ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಸಣ್ಣ ಮಗು ಇದೆ. ಫಾಝಿಲ್ ತನ್ನ ಪತ್ನಿ ಮಗುವಿನೊಂದಿಗೆ ಸೌದಿ ಅರೇಬಿಯಾದಲ್ಲೇ ವಾಸವಾಗಿದ್ದರು ಎಂದು ತಿಳಿದು ಬಂದಿದೆ.ತಡಂಬೈಲ್‌ ಫಾತಿಮಾ‌ ಸೂಪರ್‌‌ ಮಾರ್ಕೆಟ್ ನ ಅಬ್ದುಲ್ ಖಾದರ್ ಹಾಗೂ ಬೀ ಫಾತಿಮಾ ಎಂಬವರ‌ ಪುತ್ರ ಫಾಝಿಲ್ (29) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments