ಸಿಪಿಎಂ ಪಕ್ಷದ ಹಿರಿಯ ಸದಸ್ಯ, ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡ ಕಾಂ. ಚಂದು ಭಂಡಾರಿ(80) ನಿಧನ

ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾದ ಚಂದು ಭಂಡಾರಿ ಆ ಕಾಲದಲ್ಲಿ ನಡೆಯುತ್ತಿದ್ದ ರೈತರ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತಾಪಿ ಜನತೆಯ ನಾಯಕರಾಗಿ ಬೆಳೆದರು. ಜೊತೆಗೆ ಹಂಚು ಕಾರ್ಮಿಕರಾಗಿ ದುಡಿಯುವ ಮೂಲಕ ಹಂಚು ಕಾರ್ಮಿಕರ ಸಮರಶೀಲ ಹೋರಾಟಗಳಲ್ಲಿ ಭಾಗವಹಿಸಿ ಕಾರ್ಮಿಕ ನಾಯಕರಾದರು. ಬಜಾಲ್ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಅವರು ಪಕ್ಷದ ಪತ್ರಿಕೆ ಮಾರಾಟ ಮಾಡುವಲ್ಲಿ ಹಾಗೂ ಪಕ್ಷದ ನಿಧಿ ಸಂಗ್ರಹ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಮೃತರ ನಿಧನಕ್ಕೆ CPIM, CITU, AIKS, DYFI, SFI, JMS ಮಂಗಳೂರು ನಗರ ಸಮಿತಿಗಳು, ಪಕ್ಕಲಡ್ಕ ಯುವಕ ಮಂಡಲ, ಜನತಾ ವ್ಯಾಯಾಮ ಶಾಲೆ ತೀವ್ರ ಸಂತಾಪ ವ್ಯಕ್ತಡಿಸಿದೆ.
ಮೃತರು ಮೂವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
