HomeFresh Newsಪೇರಾಲು: ಫೆ. 20ರಿಂದ 22ರ ವರೆಗೆ ಅಂಬ್ರೋಟಿ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್...

ಪೇರಾಲು: ಫೆ. 20ರಿಂದ 22ರ ವರೆಗೆ ಅಂಬ್ರೋಟಿ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಮಂಡೆಕೋಲು ಗ್ರಾಮದ ಪೇರಾಲು ಅಂಬ್ರೋಟಿಯಲ್ಲಿರುವ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ. 20ರಿಂದ 22ರ ವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಶ್ರೀ ಕ್ಷೇತ್ರದಲ್ಲಿ ಶ್ರೀ ನಾಗದೇವರು ಮತ್ತು ಇರುವೆರು ಉಳ್ಳಾಕುಲು ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದೆ.

ಫೆ. 20ರಂದು ಸರ್ಪ ಸಂಸ್ಕಾರ, ಹಸಿರುವಾಣಿ ಮೆರವಣಿಗೆ, ಉಗ್ರಾಣ ತುಂಬಿಸುವುದು, ಅನ್ನ ಸಂತರ್ಪಣೆ, ಸುದರ್ಶನ ಹೋಮ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.

ಫೆ.21 ರಂದು ಗಣಪತಿ ಹವನ, ತಿಲಹವನ, ಪವಮಾನ ಹೋಮ, ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಫೆ.22ರಂದು ಗಣಪತಿ ಹವನ, ಬ್ರಹ್ಮಕಲಶ ಪೂಜೆ, ಶ್ರೀ ನಾಗದೇವರು, ಉಳ್ಳಾಕುಲು ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.

ಫೆಬ್ರವರಿ 27ರಂದು ಇರುವೆರ್ ಉಳ್ಳಾಕುಲು ನೇಮ ನಡಾವಳಿ ಗಂಧ ಪ್ರಸಾದ ವಿತರಣೆ ನಡೆಯಲಿದೆ.

ಫೆಬ್ರವರಿ 28ರಂದು ಉಪದೈವಗಳ ಕೋಲ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಗವದ್ಭಕ್ತರಾದ ತಾವೇಲ್ಲರೂ ಆಗಮಿಸಿ ಶ್ರೀ ದೈವ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಬೈಲುವಾರು ಸಂಚಾಲಕರು, ಜೀರ್ಣೋದ್ಧಾರ ಸಮಿತಿಯವರು ವಿನಂತಿಸಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments