HomeFresh Newsಸುಳ್ಯ: ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ: ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆ

ಸುಳ್ಯ: ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ: ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದಯಾನಂದ ಕಲ್ನಾರ್ ವಹಿಸಿದ್ದರು. ಸಭೆಯ ಕಾರ್ಯಕಲಾಪಗಳ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷತೆಗೆ ಲೋಕೇಶ್ ಪೆರ್ಲಂಪಾಡಿ ಮತ್ತು ಪ್ರಜ್ಞಾ ಎಸ್. ನಾರಾಯಣ್ ಸ್ಪರ್ಧಿಸಿದ್ದರು.‌ ಅಧ್ಯಕ್ಷತೆಗೆ ಚುನಾವಣೆ ನಡೆದು ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರಜ್ಞಾ ಎಸ್. ನಾರಾಯಣ್, ಕಾರ್ಯದರ್ಶಿಯಾಗಿ ಗಿರೀಶ್ ಅಡ್ಪಂಗಾಯ, ಜತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕೇರ್ಪಳ, ಗಿರೀಶ್ ಪೆರುಮುಂಡ, ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ ಹಾಗೂ ನಿರ್ದೇಶಕರಾಗಿ ಮಿಥುನ್ ಕರ್ಲಪ್ಪಾಡಿ, ಪದ್ಮನಾಭ ಅರಂಬೂರು, ಜಯದೀಪ್ ಕುದ್ಕುಳಿ, ಪದ್ಮನಾಭ ಮುಂಡೋಕಜೆ, ತೇಜೇಶ್ವರ ಕುಂದಲ್ಪಾಡಿ, ಮುರಳೀಧರ ಅಡ್ಡನಪಾರೆ, ಗೌರವ ಸಲಹೆಗಾರರಾಗಿ ದುರ್ಗಾ ಕುಮಾರ್ ನಾಯರ್ ಕೆರೆ, ಜೆ.ಕೆ.ರೈ, ಗಂಗಾಧರ ಮಟ್ಟಿ, ದಯಾನಂದ ಕೊರತ್ತೋಡಿ, ಗಂಗಾಧರ ಕಲ್ಲಪ್ಪಳ್ಳಿ, ಕೃಷ್ಣ ಬೆಟ್ಟ, ಗಿರೀಶ್ ಪೆರುಮುಂಡ, ಆಂತರಿಕ ಲೆಕ್ಕ ಪರಿಶೋಧಕರಾಗಿ ಜಯಪ್ರಕಾಶ್ ಕುಕ್ಕೆಟ್ಟಿ ಆಯ್ಕೆಯಾದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments