ಸುಳ್ಯ: “ವಿಶ್ವ ತಂಬಾಕು ವಿರೋಧಿ ದಿನಾಚರಣೆ” ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ವತಿಯಿಂದ ” ವಿಶ್ವ ತಂಬಾಕು ವಿರೋಧಿ ದಿನಾಚರಣೆ ” ಕಾರ್ಯಕ್ರಮವನ್ನು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿನಡೆಯಿತು ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಯುತ ಲೋಕನಾಥ್ ಅಮೆಚೂರ್ ರವರು ದೀಪ ಪ್ರಜ್ವಲಿಸಿ ಇಂದು ಪ್ರಜ್ವಲಿಸಿದ ದೀಪ ಅಂತರಂಗದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗುವಂತಾಗಲಿ ಎಂದು ತಿಳಿಸಿದರು .ಮಹಾತ್ಮ ಗಾಂಧೀಜಿ ಯವರ ಚಿಂತನೆಗಳನ್ನು ಅನುಷ್ಠಾನ ಮಾಡಲು ಧರ್ಮಸ್ಥಳದ ಧರ್ಮಧಿಕಾರಿಗಳು ಅಖಿಲಕರ್ನಾಟಕ ಜನಜಾಗೃತಿ ವೇದಿಕೆಯನ್ನು ಹುಟ್ಟುಹಾಕಿದರು. ಈ ವೇದಿಕೆಯ ಮುಖಾಂತರ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ತಾಲೂಕು ಯೋಜನಾಧಿಕಾರಿ ಅವರು ವ್ಯಸನ ಮುಕ್ತ ಬದುಕಿನಿಂದ ಪರಿ ಪೂರ್ಣ ಆರೋಗ್ಯ ಹಾಗೂ ನೆಮ್ಮದಿ ಸಾದ್ಯ. ತಂಬಾಕು ಇನ್ನಿತರ ಮಾದಕ ವಸ್ತುಗಳಿಂದ ಆಗುತ್ತಿರುವ ದುಷ್ಪರಿಣಾಮಗಳು ಮನುಷ್ಯನ ದೇಹದಲ್ಲಿ ಅನಾರೋಗ್ಯ ಕಾಣುತ್ತಿದ್ದು, ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ತಂಬಾಕು ವ್ಯಸನದಿಂದ ವಿದ್ಯಾರ್ಥಿ ಗಳು ಮುಕ್ತವಾಗುವುದರ ಜೊತೆಗೆ ಜಾಗೃತರಾಗ ಬೇಕಾಗಿದೆ ಎಂದು ಮಾಹಿತಿ ನೀಡಿದರು

ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಶ್ರೀ ಹರಿ ನೋಟರಿ ವಕೀಲರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಂಬಾಕಿನಿಂದ ತಯಾರಾದ ಬೀಡಿ, ಸಿಗರೇಟ್, ಗುಟ್ಕಾ,ಪಾನ್ ಮಸಾಲ,ಪಾನ್ ಬೀಡಾಗಳು, ನಶೆ ಬರಿಸುವ ವಸ್ತುಗಳನ್ನು ಬಳಸುತ್ತಿದ್ದು, ಅದರ ಚಟಕ್ಕೆ ಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಶೆ ಭರಿಸುವ ವಸ್ತುಗಳು ಬಹಳ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಆತಂಕದ ವಿಚಾರವಾಗಿದೆ. ಅದೇ ರೀತಿಯಲ್ಲಿ ಜಾಹಿರಾತಿನ ಮೋಹಕ್ಕೆ ಬಲಿ ಬಿದ್ದು ಮಕ್ಕಳು ಗುಟ್ಕಾ ತಂಬಾಕಿಗೆ ಮಾರುಹೋಗಿ ಜೇವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಹೊರ ಬರಲು ನಮ್ಮ ದೈನಂದಿನ ದಿನಚರಿ, ಅಭ್ಯಾಸ ಗಳನ್ನು ಬದಲಾಯಿಸಿ ಕೊಳ್ಳುಬೇಕು ಈ ದಿಸೆಯಲ್ಲಿ ವಿದ್ಯಾರ್ಥಿ ಗಳು ಬಹಳ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೋಹನ್ B.K ರವರು ಮಾತನಾಡಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸುವ ವ್ಯವಸ್ಥೆಯನ್ನು ಮಾಡಿದ ಸಂಸ್ಥೆಗೆ ಅಭಿನಂದನೆಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ನೀಡಿದ ಎಲ್ಲಾ ಮಾಹಿತಿಯನ್ನು ತಮ್ಮ ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಳ್ಯ ಪೊಲೀಸ್ ಠಾಣೆಯ ಉಪಠಾಣಧಿಕಾರಿಗಳಾದ ಶ್ರೀ ಶೀನಪ್ಪ, ಕಾಲೇಜಿನ ಉಪನ್ಯಾಸಕರು,ಸುಳ್ಯ ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.ಸುಮಾರು 125 ವಿದ್ಯಾರ್ಥಿಗಳು ಮಾಹಿತಿ ಪ್ರಯೋಜನವನ್ನು ಪಡೆದುಕೊಂಡರು.

Related Posts

Leave a Reply

Your email address will not be published.