ನೀರೆ-ಬೈಲೂರು ಬಿಜೆಪಿ ಕಾರ್ಯಕರ್ತರ ಸಭೆ

ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕಷ್ಟೇ ಒತ್ತು ನೀಡದೆ ಜನರ ನಾಡಿ ಮಿಡಿತ ಅರಿತು ಜನಸಾಮಾನ್ಯರ ಜೊತೆಗೆ ನಿಂತವರು. ಕಾರ್ಕಳ ಕ್ಷೇತ್ರಕ್ಕೆ ಇಂತಹ ಕೆಲಸಗಾರ ಶಾಸಕ ಬೇಕೆ ಹೊರತು ಜಾತಿವಾದಿ ಶಾಸಕ ಬೇಡ ಎಂದು ತಾ.ಪಂ ಮಾಜಿ ಅಧ್ಯಕ್ಷ ವಿಕ್ರಮ ಹೆಗ್ಡೆ ಹೇಳಿದರು.

ಕಾರ್ಕಳ ವಿಧಾನ ಸಭಾ ಕ್ಷೇತ್ರದ ನೀರೆ- ಬೈಲೂರು ಭಾಗದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾರ್ಕಳ ಕ್ಷೇತ್ರವನ್ನು ಕಳೆದ 5 ವರ್ಷದ ಅವಧಿಯಲ್ಲಿ ಅವರು ಪ್ರಗತಿಯ ಉತ್ತುಂಗ ಶಿಖರಕ್ಕೆ ಏರಿಸಿದ್ದಾರೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಅಂತರ್ಜಲದಂತಹ ಅಭಿವೃದ್ಧಿಗೆ ಒತ್ತು ನೀಡಿದಷ್ಟೇ ಅಲ್ಲ, ಪ್ರತಿ ಸಾಮಾನ್ಯನ ಸುಖ-ಕಷ್ಟಗಳಲ್ಲಿ ಅವರು 5 ವರ್ಷಗಳ ಪ್ರತಿ ದಿನವೂ ನಿಂತು ಕೆಲಸ ಮಾಡಿದವರು. ಎರಡೆರಡು ಖಾತೆಯ ಜವಾಬ್ದಾರಿ ಇದ್ದರೂ ಕ್ಷೇತ್ರದ ಜನರ ಸಮಸ್ಯೆಗೆ ಸಮಯ ಮೀಸಲಿಟ್ಟ ಇಂತಹ ಶಾಸಕರೇ ನಮಗೆ ಮುಂದೆಯೂ ಶಾಸಕನಾಗಿ ಇರಬೇಕು ಎಂದರು.

ಪ್ರಮುಖರಾದ ರವೀಂದ್ರ ನಾಯಕ್, ಮಾಲಿನಿ ಶೆಟ್ಟಿ, ಜಗದೀಶ ಪೂಜಾರಿ, ಸಂತೋಷ್ ವಾಗ್ಲೆ, ಪ್ರಶಾಂತ್ ಶೆಟ್ಟಿ ಸಹಿತ ಹಲವು ಮಂದಿ ಗಣ್ಯರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.