ಬಕ್ರೀದ್ ಹಬ್ಬಕ್ಕೆ ಮೊದಲು ದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಕೋರಿದ್ದ ಅರ್ಜಿಯ ತುರ್ತು ವಿಚಾರಣೆ ಇಲ್ಲ ಎಂದು ಸುಪ್ರೀಂ ಕೋರ್ಟು ಹೇಳಿತು.
ಒಕ್ಕೂಟ ಸರಕಾರಕ್ಕೆ ಬಕ್ರೀದ್ ಹಬ್ಬಕ್ಕೆ ಮೊದಲು ದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಆದೇಶ ಕೊಡಬೇಕು ಎಂಬ ಅರ್ಜಿಗಳು ಸಲ್ಲಿಕೆಯಾಗಿವೆ. ವಕೀಲ ಬರುಣ್ ಕುಮಾರ್ ಸಿನ್ಹಾ ಅವರು ಸಿಜೆಐ ಸೂರ್ಯಕಾಂತ್ ಎದುರು ವಿವರಣೆ ನೀಡಿ ತುರ್ತು ವಿಚಾರಣೆ ಆಗಬೇಕು ಎಂದರು.
ಒ0ದು ದಿನಕ್ಕೆ ಮೊದಲಷ್ಟೆ ನಿಮಗೆ ಇದು ನೆನಪಾಯಿತೆ? ಅಂತಿಮ ಕ್ಷಣದಲ್ಲಿ ಅರ್ಜಿ ಸಲ್ಲಿಸಲಾಗಿದೆ. ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದ ಸಿಜೆಐ ಸೂರ್ಯಕಾಂತ್ ಅವರು ತುರ್ತು ಪಟ್ಟಿಗೆ ಸೇರಿಸಲು ನಿರಾಕರಿಸಿದರು.
ಇಪ್ಪತ್ತೆಂಟನೆಯ ತಾರೀಕು ಬಕ್ರೀದ್ ಇದ್ದು, ಕೂಡಲೆ ವಿಚಾರಣೆ ಅಗತ್ಯ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಆದರೆ ಸರ್ವೋಚ್ಚ ನ್ಯಾಯಾಲಯವು ಅದನ್ನು ಪುರಸ್ಕರಿಸಲಿಲ್ಲ.
