ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದೇ ಮುಖ್ಯ: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಹೇಳಿಕೆ

ಸುರತ್ಕಲ್ ಮಾರ್ಕೆಟ್ ಕಳೆದ 5 ವರ್ಷದಿಂದ ಅಸ್ತಿಪಂಜರದಂತೆ ಉಳಿದಿದ್ದು, ಬಿಜೆಪಿ ಶಾಸಕರ ಅಭಿವೃದ್ಧಿಗೆ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವೈ.ರಾಘವೇಂದ್ರ ರಾವ್ ಅವರು , ಇಲ್ಲಿನ ಮಾರ್ಕೆಟ್ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಯಾಕೆ, ಯಾವುದೇ ದೊಡ್ಡ ಕಾಮಗಾರಿ ಅಲ್ಲದಿದ್ದರೂ ಸುರತ್ಕಲ್ ಜಂಕ್ಷನ್ ಗೆ 5 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಮೇಲ್ನೋಟಕ್ಕೆ ಭ್ರಷ್ಟಾಚಾರದ ವಾಸನೆ ಕಾಣುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಮಸೀದಿಯೊಂದರ ನವೀಕರಣಕ್ಕೆ ತಡೆ ಒಡ್ಡಿ ಸಮುದಾಯಗಳ ನಡುವೆ ದ್ವೇಷದ ವಾತಾವರಣಕ್ಕೆ ಕಾರಣರಾಗಿದ್ದಾರೆ, ಸೌಹಾರ್ಧತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

ಸುರತ್ಕಲ್ ಬ್ಲಾಕ್ ಮಾಜಿ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ ಮಾತನಾಡಿ , ಕಾಂಗ್ರೆಸ್ ತ್ಯಜಿಸಿರುವ ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಅವರು ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಆಲಿ ಬಗ್ಗೆ ಆರೋಪ ಮಾಡಿದ್ದಾರೆ. ಪಕ್ಷ ನಿಷ್ಠರಾಗಿ ನಾವು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇವೆ. ಆದರೆ ಮೂರ್ನಾಲ್ಕು ದಿನಗಳ ಮುಂಚೆಯೇ ಜೆಡಿಎಸ್ ಬಿ,ಫಾರ್ಮ್ ಪಡೆದು ಇಟ್ಟುಕೊಂಡ ಬಾವಾ ಅವರ ಪಕ್ಷ ನಿಷ್ಠೆಯನ್ನು ಪ್ರಶ್ನಿಸಬೇಕಿದೆ. ಅಧಿಕಾರವಿಲ್ಲದೆ ಸದಾ ಹಿಂದಿದ್ದು ಜನರ ಒಳಿತಿಗಾಗಿ ಕೆಲಸ ಮಾಡಿದ ಇನಾಯತ್ ಗೆಲುವಿಗೆ ಪಕ್ಷ ಶ್ರಮಿಸಲಿದೆ ಎಂದರು.

ಬ್ಲಾಕ್ ಅಧ್ಯಕ್ಷ ಉಮೇಶ್ ದಂಡೆಕೇರಿ ಮಾತನಾಡಿ, “ನಾವು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಕೆಪಿಸಿಸಿ ನೀಡಿರುವ 5 ಗ್ಯಾರಂಟಿಗಳಿಗೆ ಜನರಿಗೆ ಬೆಂಬಲ ಸೂಚಿಸುತ್ತಿದ್ದು ಇನಾಯತ್ ಅಲಿ ಅವರಂತಹ ಯೋಗ್ಯ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ” ಎಂದರು..

ಸುದ್ದಿಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಶಶಿಕಲಾ ಪದ್ಮನಾಭ, ಕೇರಳ ಮಹಿಳಾ ಕಾಂಗ್ರೆಸ್ ಜನರಲ್ ಸೇಕ್ರೆಟರಿ ಶಿಬಾ ರಾಮಚಂದ್ರ, ರಾಘವೇಂದ್ರ ರಾವ್, ರಾಜೇಶ್ ಪೂಜಾರಿ ಕುಳಾಯಿ, ಜಲೀಲ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.