ಮಂಗಳೂರಿನ ವೀ ಫೋರ್ ಟಿ.ವಿ. ವಾಹಿನಿಯ ಸಂಪಾದಕ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಪುರಸ್ಕಾರ’ ಸ್ವೀಕರಿಸಿದರು.ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ರಾಜ್ಯದಾದ್ಯಂತ 20 ಮಂದಿ ಪತ್ರಕರ್ತರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿತ್ತು. ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಪ್ರಶಸ್ತಿ ಪ್ರಧಾನ ಮಾಡಿದರು. ವಿಜಯ ಕರ್ನಾಟಕ ಆನ್ ಲೈನ್ ಸಂಪಾದಕ ಪ್ರಸಾದ್ ನಾಯಕ್ , ಡಿ.ಎಕ್ಸ್ ಮ್ಯಾಕ್ಸ್ ಮುಖ್ಯಸ್ಥ ಎಸ್.ಪಿ.ದಯಾನಂದ್ , ಹಿರಿಯ ಪತ್ರಕರ್ತರಾದ ವಿ.ನಂಜುಡಪ್ಪ, ಸದಾನಂದ ಸ್ವಾಮಿ ಪ್ರಶಸ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಟಿ.ವಿ.ನೈನ್ , ಜನಶ್ರೀ ಟಿ.ವಿ ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ , ಜನವಾಹಿನಿ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು .
ವಿ ಫೋರ್ ವಾಹಿನಿ ಸಂಪಾದಕ ತಾರಾನಾಥ್ ಗಟ್ಟಿ ಕಾಪಿಕಾಡ್ ಗೆ ಸುವರ್ಣ ಕರ್ನಾಟಕ ಮೀಡಿಯಾ ಪುರಸ್ಕಾರ
RELATED ARTICLES
