HomeFresh Newsಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪಡುಬಿದ್ರಿ ವಾರ್ಷಿಕ ಮಹಾಸಭೆ : ಶೇ.21 ಡಿವಿಡೆಂಡ್ ಘೋಷಣೆ

ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪಡುಬಿದ್ರಿ ವಾರ್ಷಿಕ ಮಹಾಸಭೆ : ಶೇ.21 ಡಿವಿಡೆಂಡ್ ಘೋಷಣೆ

ಪಡುಬಿದ್ರಿ: ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 15ನೇ ವರ್ಷದ ವಾರ್ಷಿಕ ಮಹಾಸಭೆಯು ಸೆಪ್ಟಂಬರ್ 12 ರಂದು ಹೆಜಮಾಡಿ ಬಿಲ್ಲವರ ಸಂಘದ ರತ್ನಾ ಶಂಕರ ಕೋಟ್ಯಾನ್ ಸಭಾಭವನದಲ್ಲಿ ನೆರವೇರಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವರ್ಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಶೇಖರ್ ಕೆ ಕರ್ಕೇರರವರು ಮಾತನಾಡಿ, ಸಹಕಾರಿಯು 2024- 25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಹಕಾರಿಯು ರೂ- 35.58 ಕೋಟಿ ಠೇವಣಿಯನ್ನು ಸಂಗ್ರಹಿಸಿ ರೂಪಾಯಿ 29.66 ಕೋಟಿ ಸಾಲವನ್ನು ವಿತರಿಸಿ, ವರದಿ ವರ್ಷದಲ್ಲಿ ರೂಪಾಯಿ 62.51 ಲಕ್ಷ ನಿವ್ವಳ ಲಾಭವನ್ನು ಗಳಿಸಿರುತ್ತದೆ. ಸತತ ನಾಲ್ಕು ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ‘ಎ’ ಗ್ರೇಡನ್ನು ಪಡೆದಿದ್ದು ಶೇ 21 ಡಿವಿಡೆಂಡ್ ಘೋಷಿಸಲಾಗಿದೆ ಎಂದರು.

ಸಹಕಾರಿಯ ಏಳು ಶಾಖೆಗಳಿಂದ 7 ಉತ್ತಮ ಸದಸ್ಯರಾದ ಶ್ರೀ ಅಶೋಕ್, ಶ್ರೀ ಸೀತಾರಾಮ್ ಎಸ್. ಅಮೀನ್, ಶ್ರೀ ಶಿವಣ್ಣ ಸಿ. ಬಂಗೇರ, ಶ್ರೀಮತಿ ಅನ್ನಪೂರ್ಣ ಜಿ , ಶ್ರೀ ಜಯಂತ ನಾರ್ಣ ಪೂಜಾರಿ, ಶ್ರೀಮತಿ ಸಾವಿತ್ರಿ ಅಕ್ಕೇರಿ, ಶ್ರೀಮತಿ ಶಾಂತಿ ಶರತ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿಭಾಗಗಳಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದಿರುವ 7 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ಮೈಸೂರು ಪ್ರಾಂತದ ಪ್ರಾಂತೀಯ ಅಧಿಕಾರಿ ಶ್ರೀ ಗುರುಪ್ರಸಾದ್ ಬಂಗೇರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು ಸನ್ಮಾನವನ್ನು ಸ್ವೀಕರಿಸಿ ಶ್ರೀಯುತರು ಕರ್ನಾಟಕ ರಾಜ್ಯದಾದ್ಯಂತ ಸಹಕಾರಿ ಸಂಘಗಳ ಸೇವೆಗಳನ್ನು ವಿವರಿಸಿ ಜನರ ಭರವಸೆ ಮತ್ತು ನಂಬಿಕೆಗೆ ಸಹಕಾರಿ ಸಂಘಗಳು ಪಾತ್ರವಾಗಿವೆ ಮಾತ್ರವಲ್ಲ ಉತ್ತಮ ಸೇವೆಯನ್ನೂ ಸಲ್ಲಿಸುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸ್ಥಳೀಯವಾಗಿ ನೂರು ಶೇಕಡ ಫಲಿತಾಂಶವನ್ನು ಪಡೆದಿರುವ ವಿದ್ಯಾಸಂಸ್ಥೆಗಳಾದ ಆಲ್ ಅಜಾರ್ ಆಂಗ್ಲ ಮಾಧ್ಯಮ ಶಾಲೆ ಮತ್ತು ವಿದ್ಯಾ ಪ್ರಸಾರ ವಿದ್ಯಾಮಂದಿರ‌ ಹೆಜಮಾಡಿಕೋಡಿ. ಸರಕಾರಿ ಪ್ರೌಢಶಾಲೆ ಹೆಜಮಾಡಿ ಮತ್ತು ಸರಕಾರಿ ಪ್ರೌಢಶಾಲೆ ಹೆಜಮಾಡಿ ಕೋಡಿ ನಾಲ್ಕು ವಿದ್ಯಾಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವರ್ಷದ ಆರೋಗ್ಯ ನಿಧಿಯನ್ನು ಶ್ರೀ ಮುರಳೀಧರ್ ಮುಕ್ಕರವರಿಗೆ ವಿತರಣೆ ಮಾಡಲಾಯಿತು.

ಸಭೆಯಲ್ಲಿ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಸುಧೀರ್ ಕುಮಾರ್ ವೈ ಯವರು ಮಾತನಾಡಿ ಸಹಕಾರಿಯ ಅತ್ಯುನ್ನತ ಸೇವೆಯನ್ನು ನೀಡುವಲ್ಲಿ ಸದಸ್ಯರ ಹಾಗೂ ಗ್ರಾಹಕರ ಮನವನ್ನು ಸ್ವರ್ಣ ಸೌಹಾರ್ದ ಇಂದು ಗೆದ್ದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಹಕಾರಿಯ ನಿರ್ದೇಶಕರುಗಳಾದ ಶ್ರೀ ವೈ ಸುಕುಮಾರ್, ಶ್ರೀ ತಾರನಾಥ ಎಚ್ ಬಿ, ಶ್ರೀ ಮಹೇಶ್ ಶಾಂತಿ, ಶ್ರೀ ವೈ ದೀಪಕ್ ಕುಮಾರ್, ಶ್ರೀ ಲೀಲೇಶ್ ವಿ ಸುವರ್ಣ, ಶ್ರೀಮತಿ ಪ್ರಿಯದರ್ಶಿನಿ,ಷಶ್ರೀಮತಿ ರಮಿತಾ ಜಿ ಪೂಜಾರಿ, ಶ್ರೀಮತಿ ಶುಭಾಂಜಲಿಯವರು ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಉಡುಗೊರೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರೀತಿ ಮತ್ತು ರಕ್ಷಿತಾ ರವರು ಪ್ರಾರ್ಥಿಸಿ, ಶ್ರೀಮತಿ ಪಾವನರವರು ಸ್ವಾಗತಿಸಿ ವಾರ್ಷಿಕ ವರದಿಯನ್ನು ಶ್ರೀಮತಿ ರಶ್ಮಿತಾ ರವರು ಮಂಡಿಸಿದರು ಸನ್ಮಾನಿತರ ವಿವರವನ್ನು ಕುಮಾರಿ ನಿಶ್ಚಿತ ಮತ್ತು ಕುಮಾರಿ ಆಶಿಕಾರವರು ಓದಿ, ಕುಮಾರಿ ಪೂಜಾರವರು ಧನ್ಯವಾದವನ್ನು ಅರ್ಪಿಸಿದರು.

ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಭಾಸ್ಕರ್ ಅಮೀನ್ ತೋಕೂರು ರವರು ಕಾರ್ಯಕ್ರಮವನ್ನು ನಿರೂಪಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments