Home Posts tagged #belthangady (Page 5)

“ವಿದ್ಯೆಯನ್ನು ಬಳಸಿ – ಬೆಳೆಸಿ” : ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿಯ ಕಾರ್ಯದರ್ಶಿ ಶ್ರೀ. ಡಿ. ಹರ್ಷೇಂದ್ರ ಕುಮಾರ್

ಉಜಿರೆ : ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲಿ ಛಲ ಎನ್ನುವುದು ಮುಖ್ಯ. ಛಲ ಇದ್ದರೆ ಎಂತಹ ಕಷ್ಟದ ಕೆಲಸವನ್ನಾದರೂ ಸಾಧಿಸಲು ಸಾಧ್ಯ ಎಂದು ಎಸ್.ಡಿ.ಎಂ ಸೊಸೈಟಿಯ ಕಾರ್ಯದರ್ಶಿ ಶ್ರೀ. ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಉಜಿರೆಯ ಎಸ್.ಡಿ.ಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಹಿರಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ

ನೀರೆಂದು ಭಾವಿಸಿ ಪೆಟ್ರೋಲ್‌ ಕುಡಿದು ಅಜ್ಜಿ ಸಾವು

ನೀರು ಎಂದು ಬಾಟಲಿಯಲ್ಲಿದ್ದ ಪೆಟ್ರೋಲ್‌ ಅನ್ನು ಕುಡಿದು ಅಜ್ಜಿ ಸಾವನ್ನಪ್ಪಿದ ಘಟನೆ ಪೆರ್ನೆ ಸಂಪದಕೋಡಿಯಲ್ಲಿ ನಡೆದಿದೆ.ಪದ್ಮಾವತಿ ಅವರು ಸೆ.26ರಂದು ಪೆರ್ನೆಯ ಮಗಳ ಮನೆಗೆ ಬಂದಿದ್ದರು. ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ತಂದಿಟ್ಟಿದ್ದ ಪೆಟ್ರೋಲ್‌  ಬಾಟಲಿಯನ್ನು ನೀರೆಂದು ಭಾವಿಸಿ ಕುಡಿದಿದ್ದಾರೆ. ಈ ಸಂದರ್ಭ ಅಸ್ವಸ್ಥರಾದ ಅವರನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೇ ಬುಧವಾರ

ದೇವಸ್ಥಾನಗಳು ಅನಧಿಕೃತ ಇದ್ರೆ ಅದನ್ನು ಅಧೀಕೃತವನ್ನಾಗಿ ಮಾಡಬೇಕು : ಡಾ|ಡಿ.ವೀರೇಂದ್ರ ಹೆಗ್ಗಡೆ

ಮೈಸೂರು ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೂ ಅನಧಿಕೃತ ದೇವಸ್ಥಾನ ಇಲ್ಲ ಇರೋದೆಲ್ಲವೂ ಅಧೀಕೃತ ದೇವಸ್ಥಾನಗಳೇ ಅನಧಿಕೃತ ಇದ್ರೆ ಅದನ್ನು ಅಧೀಕೃತ ವನ್ನಾಗಿ ಮಾಡಬೇಕು ಕಾನೂನು ಯಾರನ್ನೂ ಬಿಡೋದಿಲ್ಲ ಕಾನೂನನ್ನು ಎಲ್ಲರೂ ಪಾಲನೆ ಮಾಡಬೇಕು ಅನಧಿಕೃತ ದೇವಸ್ಥಾನಗಳಿದ್ದರು ಅದನ್ನು ಅಧೀಕೃತ ಮಾಡಬೇಕು ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.

ಶೈಕ್ಷಣಿಕ ಸಂಸ್ಥೆಯ ಬೆಳವಣಿಗೆಯಲ್ಲಿ ವೃತ್ತಿಪರತೆ, ತಂಡಸ್ಫೂರ್ತಿ ಅಗತ್ಯ: ಡಾ. ಡಿ.ವೀರೇಂದ್ರ ಹೆಗ್ಗಡೆ

ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳ ವ್ಯಕ್ತಿಗತ ವೃತ್ತಿಪರ ಬದ್ಧತೆಯು ಶೈಕ್ಷಣಿಕ ಸಂಸ್ಥೆ ವ್ಯಾಪಕ ಮನ್ನಣೆ ಗಳಿಸುವುದಕ್ಕೆ ಸಹಾಯಕವಾಗುತ್ತದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ವೃತ್ತಿಪರ ಬದ್ಧತೆಯೊಂದಿಗೆ

ಸ್ನಾನಗೃಹದಲ್ಲಿ ಅಡಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಬೆಳ್ತಂಗಡಿ: ಸ್ನಾನಗೃಹದ ಒಳಗೆ ಅವಿತಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ, ಕಾಡಿಗೆ ಬಿಟ್ಟ ಘಟನೆ ಅಳದಂಗಡಿಯ ಕೆದ್ದುವಿನಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಅಳದಂಗಡಿ, ಕೆದ್ದು ನಿವಾಸಿ ಗೋಪಾಲಕೃಷ್ಣ ಭಟ್ ಅವರ ಜಿ.ಕೆ.ಫಾರ್ಮ್ಸ್ ಮನೆಯ ಸ್ನಾನ ಗೃಹದಲ್ಲಿ ಕಾಳಿಂಗ ಸರ್ಪ ಅವಿತು ಕುಳಿತಿತ್ತು. ಇಂದು ಬೆಳಗ್ಗೆ ಮನೆಯವರು ಮುಖ ತೊಳೆಯಲು ಒಳಗಡೆ ಹೋಗಿದ್ದಾರೆ, ಈ ವೇಳೆ ಒಳಗಡೆಯಿಂದ ಶಬ್ದ ಕೇಳಿಸಿದ್ದು ಕೂಡಲೇ ಅಂತಕದಿಂದ ಹೊರಗಡೆ ಓಡಿಬಂದಿದ್ದಾರೆ.

ವಾರಾಂತ್ಯದ ಕರ್ಫ್ಯೂನಿಂದ ಆರ್ಥಿಕ ನಷ್ಟ ಅನುಭವಿಸಿದ್ದೇವೆ : ಬೆಳ್ತಂಗಡಿಯಲ್ಲಿ ವರ್ತಕರ ಸಂಘದ ಅರವಿಂದ ಕಾರಂತ್ ಹೇಳಿಕೆ

ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 64 ರಿಂದ65ದಿನಗಳ ಕಾಲ ಬೆಳ್ತಂಗಡಿ ತಾಲೂಕಿನ ಕೈಗಾರಿಕಾ ಸಂಘದ ಅಡಿಯಲ್ಲಿ ಬರುವ ವರ್ತಕರು ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೇವೆ. ಆ ನಂತರ ಜಿಲ್ಲಾಧಿಕಾರಿಗಳು ಮಾಡಿರುವ ವಾರಾಂತ್ಯದ ಕರ್ಪ್ಯುನಿಂದಾಗಿ ಅಂಗಡಿ ಮಾಲಕರಾದ ನಾವು ಆರ್ಥಿಕ ನಷ್ಟವನ್ನು ಅನುಭವಿಸಿದ್ದೇವೆ. ಅಲ್ಲದೆ ನೂರಾರು ನೌ ಕರರು ಕೆಲಸವನ್ನು ಕಳೆದು ಕೊಂಡು ಕಂಗಾಲಾಗಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತ್ ಹೇಳಿದರು. ಅವರು

“ಭಕ್ತಿಕಾವ್ಯವು ಸಾಮಾಜಿಕ ಚೇತನದ ಸ್ಪೂರ್ತಿ” ಡಾ.ಮಂಜುನಾಥ ಅಂಬಿಗ

ಶ್ರೀ ಧರ್ಮಸ್ಥಳ ಮಂಜುನಾಥೇಶ್ಡರ ಮಹಾವಿದ್ಯಾಲಯದ ಹಿಂದಿ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಅಂಬಿಗ [ಪ್ರೋ. ಮತ್ತು ಉಪನ್ಯಾಸಕರು ದಕ್ಷಣಬಾರತ ಸ್ನಾತಕೋತ್ತರ ಕೇಂದ್ರ ಹಿಂದಿ ಪ್ರಚಾರಸಭಾ ಮದ್ರಾಸ ಅವರು ಮದ್ಯಯುಗದ ಕಾವ್ಯಪರಂಪರೆ ಬಾರತೀಯ ಸಮಾಜಿಕ ಜೀವನಕ್ಕೆ ಚೇತನ ತುಂಬಿದ್ದಲ್ಲದೆ ಕಬೀರದಾಸರು, ಸೂರದಾಸರು ತುಲಸಿದಾಸರು ಬಿಹಾರಿಲಾಲರು ರಹೀಮರಾದಿಯಾಗಿ ತಮ್ಮ ತತ್ವಪದಗಳೊಂದಿಗೆ ಅಸಂಘಟಿತ ಗೊಂದಲ ಹಾಗು ಆಸುರಕ್ಷಿತ ಸಮಾಜವನ್ನ ಬೆಸೆಯುವ

ಉಜಿರೆ ಕಾಲೇಜಿನ ವಾರ್ಷಿಕ ಸಂಚಿಕೆ ಮನೀಷಾಗೆ ವಿ.ವಿ ಮಟ್ಟದಲ್ಲಿ ಪ್ರಥಮ ಸ್ಥಾನ

ಉಜಿರೆ ಶ್ರೀ. ಧ. ಮಂ ಕಾಲೇಜು (ಸ್ವಾಯತ್ತ) ಇದರ ವಾರ್ಷಿಕ ಸಂಚಿಕೆ ‘ಮನೀಷಾ’ಕ್ಕೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಮೊದಲ ಸ್ಥಾನದ ಹೆಗ್ಗಳಿಕೆ ಲಭಿಸಿದೆವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಗೆ ಅತ್ಯುತ್ತಮ ವೇದಿಕೆಯಾದ ಪ್ರಶಸ್ತಿ ವಿಜೇತ 500 ಪುಟಗಳ ಈ ಸಂಚಿಕೆಯಲ್ಲಿ ಸ್ಥಳೀಯ ವೈವಿಧ್ಯತೆ, ಕ್ಷೇತ್ರಾಧ್ಯಯನ, ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳ ಮಾಹಿತಿ, ಬರಹ, ಕಥೆ, ಕವನ, ಲೇಖನ, ಚುಟುಕು, ವ್ಯಂಗ್ಯಚಿತ್ರ, ವಾರ್ಷಿಕ

ಔಟ್‌ಲುಕ್ ಸಮೀಕ್ಷೆಯಲ್ಲೂ ಎಸ್.ಡಿ.ಎಂ.ಗೆ ಉತ್ಕೃಷ್ಟ ಸ್ಥಾನ

ರಾಷ್ಟ್ರಮಟ್ಟದ ಜನಪ್ರಿಯ ನಿಯತಕಾಲಿಕೆ ‘ಔಟ್‍ಲುಕ್’ ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಗೆ ವಿವಿಧ ವಿಭಾಗಗಳಿಗೆ ಉತ್ಕøಷ್ಟ ಮನ್ನಣೆ ಲಭ್ಯವಾಗಿದೆ. ಸಮೀಕ್ಷೆಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ರಾಷ್ಟ್ರಮಟ್ಟದಲ್ಲಿ 18ನೇ ಸ್ಥಾನ ಲಭ್ಯವಾಗಿದ್ದು, ಬಿಸಿಎಗೆ 17 ಸ್ಥಾನ, ಸಮಾಜ ಕಾರ್ಯ ವಿಭಾಗಕ್ಕೆ 22ನೇ ಸ್ಥಾನ ಪ್ರಾಪ್ತವಾಗಿದೆ. ಬಿ.ಬಿ.ಎ ವಿಭಾಗಕ್ಕೆ 34,

ಉದ್ಯೋಗಕ್ಕಾಗಿ ನಿರೀಕ್ಷಿಸಬೇಡಿ – ನೀವೇ ಉದ್ಯೋಗಗಳನ್ನು ಸೃಷ್ಟಿಸಿ : ಅಬ್ದುಲ್ಲ ಮಡುಮೂಲೆ

“ನೀವು ಶ್ರೀಮಂತರಾಗಬೇಕೆಂಬ ಧ್ಯೇಯ ಹೊಂದಿದ್ದರೆ ಬೇರೆಯವರಿಗಾಗಿ ದುಡಿಯಬೇಡಿ. ನಿಮ್ಮ ಅಭಿವೃದ್ಧಿಗಾಗಿಯಷ್ಟೇ ಶ್ರಮ ಪಡಿ. ನಿಮ್ಮ ಕನಸುಗಳನ್ನು ಸಾಕಾರಮಾಡಿಕೊಳ್ಳಬೇಕಾದರೆ ಉದ್ಯೋಗಕ್ಕಾಗಿ ನಿರೀಕ್ಷೆ ಮಾಡಬೇಡಿ. ಬದಲಾಗಿ ನೀವೇ ಇತರರಿಗೆ ಉದ್ಯೋಗ ಸೃಷ್ಟಿಸಿಕೊಡುವಷ್ಟು ಪ್ರಬಲವಾಗಿ ಬೆಳೆಯಲು ನಿರ್ಧರಿಸಿ, ಅದರಂತೆಯೇ ಮುನ್ನಡೆದು ಯಶಸ್ಸು ಪಡೆಯಿರಿ” ಎಂದು ಅಬುಧಾಬಿ ಸರ್ಕಾರದ ಸೈಬರ್ ಫೌಂಡೇಶನ್ ಹಿರಿಯ ಆರ್ಥಿಕ ನಿಯಂತ್ರಣ ಅಧಿಕಾರಿಯಾದ ಸಿ. ಎ. ಅಬ್ದುಲ್ಲಾ ಮಡುಮೂಲೆ