Homeಕರಾವಳಿನೀರೆಂದು ಭಾವಿಸಿ ಪೆಟ್ರೋಲ್‌ ಕುಡಿದು ಅಜ್ಜಿ ಸಾವು

ನೀರೆಂದು ಭಾವಿಸಿ ಪೆಟ್ರೋಲ್‌ ಕುಡಿದು ಅಜ್ಜಿ ಸಾವು

ನೀರು ಎಂದು ಬಾಟಲಿಯಲ್ಲಿದ್ದ ಪೆಟ್ರೋಲ್‌ ಅನ್ನು ಕುಡಿದು ಅಜ್ಜಿ ಸಾವನ್ನಪ್ಪಿದ ಘಟನೆ ಪೆರ್ನೆ ಸಂಪದಕೋಡಿಯಲ್ಲಿ ನಡೆದಿದೆ.ಪದ್ಮಾವತಿ ಅವರು ಸೆ.26ರಂದು ಪೆರ್ನೆಯ ಮಗಳ ಮನೆಗೆ ಬಂದಿದ್ದರು. ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ತಂದಿಟ್ಟಿದ್ದ ಪೆಟ್ರೋಲ್‌  ಬಾಟಲಿಯನ್ನು ನೀರೆಂದು ಭಾವಿಸಿ ಕುಡಿದಿದ್ದಾರೆ. ಈ ಸಂದರ್ಭ ಅಸ್ವಸ್ಥರಾದ ಅವರನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೇ ಬುಧವಾರ ಸಾವನ್ನಪ್ಪಿದ್ದಾರೆ.ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments