ನೇಚರ್ ಹ್ಯೂಮನ್ ಬಿಹೇವಿಯರ್‌ನಲ್ಲಿ ಅಲ್ಬೇನಿಯಾದ ಜನರ ಬಗೆಗಿನ ಹೊಸ ಡಿಎನ್‌ಎ ಅಧ್ಯಯನ ಪ್ರಕಟವಾಗಿದೆ.

ಅಲ್ಬೇನಿಯನರು ಪಡುವಣ ಯೂರೋಪಿನ ರೋಮಾ ಜನರಲ್ಲ, ಮೂಡಣ ವಂಶವಾಹಿ ಸಂಬಂಧದವರು ಎಂದು ಸಂದೇಹಿಸಲಾಗಿತ್ತು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಲಿಯೋನಿಡಸ್ ರೋಮನೋಸ್ ಡಾವ್ರಾನೊಗ್ಲು ತಜ್ಞರು ಈಗ ಡಿಎನ್‌ಎ ಅಧ್ಯಯನ ನಡೆಸಿ ವರದಿ ಪ್ರಕಟಿಸಿದ್ದಾರೆ.
ಕ್ರೋಶಿಯಾ ಮೊದಲಾದೆಡೆಯ ಪೂರ್ವ ಭಾಷಾ ಪ್ರಭಾವ ಅಲ್ಬೇನಿಯನರ ಭಾಷೆಯಲ್ಲಿ 20 ಶೇಕಡಾಕ್ಕೂ ಕಡಿಮೆ ಇದೆ. ಅಲ್ಬೇನಿಯಾ ಎಂಬುದು ಕ್ರಿಸ್ತ ಶಕ 800ರ ಈಚೆಗೆ ಮಾತ್ರ ದಾಖಲಾಗಿದೆ; ಹಿಂದೆ ಏನು?

ಇಂದಿನ ಅಲ್ಬೇನಿಯಾ, ಮೆಸಡೋನಿಯಾ ಮತ್ತು ಕೊಸೊವೋದ ಬಡಗಣ ಭಾಗದಲ್ಲಿ ಕಲ್ಗಾಲದಿಂದಲೂ ಇಲ್ರಿಯನ್ ಮತ್ತು ಡಾರ್ಡಾನಿಯನ್ ಜನಾಂಗಗಳವರು ಇದ್ದರು. ಅವೆರಡರ ಕೂಡಿಕೆ ಅಲ್ಬೇನಿಯನರಲ್ಲಿ ಪ್ರಭಾವಿಸಿದೆ. ಇವರೆಲ್ಲ ಗ್ರೀಕ್ ರೋಮಾ ಜನರೇ ಆಗಿದ್ದಾರೆ.
ಅಲ್ಬೇನಿಯಾದ ಉತ್ಖನನ ಕೂಡ ಹಿಂದಿನ ಕಾಲದ ಕೊಂಡಿ ಕಾಣಿಸಿದೆ. ಅದೇ ರೀತಿ ಸಂಶಯದ್ದು ಎನ್ನಲಾಗಿತ್ತು ಭಾರತದ ರೂಪ್‌ಕುಂಡ್ ಬಳಿಯ ಕೆಲವರ ಮೂಲ. ಅವರ ಡಿಎನ್‌ಎ ಗ್ರೀಕ್ ಮೂಲದ್ದು ಎಂದೂ ಈ ಪ್ರಬಂಧದಲ್ಲಿ ಹೇಳಲಾಗಿದೆ.

