ಮಂಗಳೂರು ವಿಶ್ವ ವಿದ್ಯಾಲಯದ 40ನೆ ಘಟಿಕೋತ್ಸವ ಎಪ್ರಿಲ್ 23ರಂದು ನಡೆಯಲಿದ್ದು, ಸಮಾಜಸೇವಕಿ ಹೇಮಾವತಿ ವಿ ಹೆಗ್ಗಡೆ, ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿ.ವಿ.ಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಅವರು
ಕಾರ್ಕಳ ಉತ್ಸವದ ಎರಡನೇ ದಿನವಾದ ಅಂಗವಾಗಿ ಚಲನಚಿತ್ರೋತ್ಸವಕ್ಕೆ ಪ್ಲಾನೆಟ್ ಚಿತ್ರಮಂದಿರದಲ್ಲಿ ತುಳು ನಿರ್ದೇಶಕ ಹಾಗೂ ಚಿತ್ರನಟ ದೇವದಾಸ್ ಕಾಪಿಕಾಡ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಚಿವರಿಗೆ ಸರಕಾರ ಯೋಗ್ಯತೆ ತಕ್ಕ ಪಟ್ಟವನ್ನು ನೀಡಿದೆ. ಜಿಲ್ಲೆಯ ತುಳು ಚಿತ್ರ ಬಿಡುಗಡೆಗೆ ಉಭಯ ಜಿಲ್ಲೆಗಳಲ್ಲಿ ತುಳು ಚಿತ್ರಗಳಿಗಾಗಿ 10, 20 ಕೇಂದ್ರಗಳನ್ನು ಮಾಡಿಕೊಡಬೇಕಾಗಿ ಸಚಿವರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು. ನಂತರ ಮಾತನಾಡಿದ ಸಚಿವ ಸುನಿಲ್
ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ಶಾಲೆ ಕಾಲೇಜುಗಳು ಸಹಿತ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದರೂ ಜಿಲ್ಲೆಯಲ್ಲಿ ಸಿನಿಮಾ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡದಿರುವುದು ಹಾಗೂ ನಾಟಕ ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡದಿರುವುದರಿಂದ ಕಲಾವಿದರ ಪರಿಸ್ಥಿತಿ ಹದಗೆಟ್ಟಿದೆ. ನಾಟಕ, ಸಿನಿಮಾದಿಂದಲೇ ಜೀವನ ಸಾಗಿಸುವ ಕಲಾವಿದರ ಸ್ಥಿತಿ ತುಂಬಾ ಕಠಿಣವಾಗಿದೆ. ಹೀಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರಾಜ್ಯದ ಮುಖ್ಯಮಂತ್ರಿಯವರಿಗೆ