ಭಾರತದಲ್ಲಿ ಕಳೆದ ಹನ್ನೆರಡು ವರುಷಗಳಲ್ಲಿ ಬಡವ ಬಲ್ಲಿದರ ನಡುವೆ ಕೊಳ್ಳು ಶಕ್ತಿಯ ಅಂತರ 17 ಶೇಕಡಾ ಹೆಚ್ಚಾಗಿರುವುದಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.
ಭಾರತದ ವಿದೇಶೀ ಸಾಲವು ಕಳೆದ ಹನ್ನೆರಡು ವರುಷಗಳಲ್ಲಿ 48 ಲಕ್ಷ ಕೋಟಿ ರೂಪಾಯಿಗಳಿಂದ 215 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಬಹುತೇಕ ಐದು ಪಟ್ಟು. ಲಿಂಗ ತಾರತಮ್ಯದಲ್ಲಿ ಭಾರತವು 148 ದೇಶಗಳಲ್ಲಿ 131ನೇ ಸ್ಥಾನದಲ್ಲಿದೆ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 193 ದೇಶಗಳಲ್ಲಿ 130ನೇ ಸ್ಥಾನದಲ್ಲಿದೆ. ಸಂತೋಷ ಪ್ರಜೆಗಳ ಸೂಚ್ಯಂಕದಲ್ಲಿ ಭಾರತವು 147 ದೇಶಗಳಲ್ಲಿ 116ನೇ ಸ್ಥಾನದಲ್ಲಿದೆ.
ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತವು 187 ದೇಶಗಳಲ್ಲಿ 157ನೇ ಸ್ಥಾನದಲ್ಲಿದೆ.
ಕಾಂಗ್ರೆಸ್ಸೇತರ ಸರಕಾರ ಅಡವಿಟ್ಟ ಚಿನ್ನವನ್ನು 1992ರಲ್ಲಿ ವಿತ್ತ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಬಿಡಿಸಿ ತಂದರು. ಇತ್ತೀಚಿಗೆ ಸರಕಾರ ಚಿನ್ನ ಮಾರಿದ ಸುದ್ದಿ ಬಂತು. ಅದು ಗಾಳಿ ಸುದ್ದಿ ಎಂದು ಆರ್ಬಿಐ ಹೇಳಿದೆ; ಸರಕಾರ ಹೇಳಿಲ್ಲ; ಹಾಗೇ ಆಗಲಿ.
ಭಾರತದ ಹೆಚ್ಚುತ್ತಿರುವ ಸಿರಿವಂತಿಕೆಯು ಹದಿನೈದರಷ್ಟು ಕುಟುಂಬಗಳಿಗೆ ಮಾತ್ರ ಸೇರುತ್ತಿದೆ.


