Home Posts tagged #election 2023 (Page 2)

ಹೆಮ್ಮಾಡಿ : ಬಿಜೆಪಿ ಮಹಿಳಾ ಬೃಹತ್ ಸಮಾವೇಶ

ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡ ಅಪಾರ ಸಂಖ್ಯೆಯ ತಾಯಂದಿರು, ಅಕ್ಕ ತಂಗಿಯರನ್ನು ಕಂಡಾಗ, ಬಿಜೆಪಿ ಬಗ್ಗೆ ಬೈಂದೂರಿನ ಮಹಿಳೆಯರಿಗೆ ನಂಬಿಕೆಯಿರುವುದು ಖಾತ್ರಿ. ಅಪಾರ ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಬೈಂದೂರಲ್ಲಿ ಗುರುರಾಜ್ ಗಂಟೆಹೊಳೆ ಅವರ ಗೆಲುವು ನಿಶ್ಚಿತ ಎಂದು ಬಿಜೆಪಿಯ ಸ್ಟಾರ್ ಪ್ರಚಾರಕಿ, ನಟಿ ತಾರಾ ವಿಶ್ವಾಸ ವ್ಯಕ್ತಪಡಿಸಿದರು. ಅವರು ಹೆಮ್ಮಾಡಿಯ ಜಯಶ್ರೀ

ಬೆಳ್ತಂಗಡಿ : ಪಡಂಗಡಿಯಲ್ಲಿ ಬಿಜೆಪಿ ಸಾರ್ವಜನಿಕ ಪ್ರಚಾರ ಸಭೆ

ವಿಧಾನಸಭಾ ಚುನಾವಣೆಯ ಹಿನ್ನೆಲೆ ಪಡಂಗಡಿಯಲ್ಲಿ ನಡೆದ ಮೊದಲ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಹರೀಶ ಪೂಂಜಾ ಅವರು ಭಾಗಿಯಾಗಿ ಚಾಲನೆಯನ್ನು ನೀಡಿದರು. ಸಾರ್ವಜನಿಕ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಬೆಳ್ತಂಗಡಿ ಕ್ಷೇತ್ರ ಈಗ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ, ಅಭಿವೃದ್ಧಿಯ ಮಹಾಪರ್ವವೇ ನಡೆದಿದೆ. ಬೆಳ್ತಂಗಡಿಯನ್ನು ಮತ್ತಷ್ಟು ಬೆಳಗಲು ಕ್ಷೇತ್ರದ ಜನತೆ ಮತ್ತೊಂದು ಬಾರಿ ಹರೀಶ ಪೂಂಜಾ ಅವರನ್ನು

ಕಾವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ : ಬಿಜೆಪಿಗರಿಗೂ ಗ್ಯಾರಂಟಿ ಕಾರ್ಡು ಕೊಡಿ; ಅಶೋಕ್ ರೈ

ಪುತ್ತೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ, ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ನಾಲ್ಕು ಗ್ಯಾರಂಟಿ ಯಓಜನೆಯು ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಯಾಗುತ್ತದೆ. ಈಗಾಗಲೇ ಕಾರ್ಯಕರ್ತರು ಎಲ್ಲಾ ಮನೆಗಳಿಗೂ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡು ವಿತರಣೆ ಮಾಡುತ್ತಿದ್ದು ಬಿಜೆಪಿಗರ ಮನೆಗಳಿಗೂ ಕಾರ್ಡು ವಿತರಿಸಿ ಯಾವುದೇ ತಾರತಮ್ಯ ಮಾಡಬೇಡಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ

ಚುನಾವಣೆ ಹಿನ್ನೆಲೆ, ಕೇರಳ-ಕರ್ನಾಟಕ ಗಡಿಭಾಗದಲ್ಲಿ ತೀವ್ರ ತಪಾಸಣೆ

ಮಂಜೇಶ್ವರ : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇರಳ ಪೆÇಲೀಸರು ಕೂಡಾ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ.ಕರ್ನಾಟಕ ಭಾಗಕ್ಕೆ ವ್ಯಾಪಾರ, ಚಿಕಿತ್ಸೆ, ಶಿಕ್ಷಣ ಪ್ರವೇಶ ಸೇರಿದಂತೆ ವಿವಿದ ಉದ್ದೇಶಗಳಿಗಾಗಿ ಅನೇಕ ಜನರು ಕೇರಳದಿಂದ ಗಡಿ ದಾಟಿರವರು ಮರಳಿ ಬರುವಾಗ ದೊಡ್ಡ ಮೊತ್ತದ ಹಣ ಜೊತೆಯಾಗಿದ್ದರೆ ಸಾಕಷ್ಟು ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳ ಕೊರತೆಯಿಂದ

ಚುನಾವಣಾ ಪ್ರಚಾರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ : ಕೋಲ್ನಾಡು ರಾ.ಹೆ.ಬಳಿಯ ಜಾಗದಲ್ಲಿ ಚಪ್ಪರ ಮುಹೂರ್ತ

ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಮೂಲ್ಕಿಗೆ ಆಗಮಿಸುವ ಹಿನ್ನಲೆಯಲ್ಲಿ ಕೋಲ್ನಾಡು ರಾಷ್ಟ್ರೀಯ ಹೆದ್ದಾರಿ ಬಳಿಯ ಜಾಗದಲ್ಲಿ ಇಂದು ಚಪ್ಪರ ಮುಹೂರ್ತ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಉಮಾನಾಥ

ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ವರ್ಚುವಲ್ ವೇದಿಕೆ ಮೂಲಕ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿದರು. ಮಂಗಳೂರಿನ ಡೊಂಗರಕೇರಿಯಲ್ಲಿರುವ ಸುದೀಂದ್ರ ಸಭಾಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಿದ್ದರು.

ಕಾರ್ಕಳ; ಕಡ್ತಲ ಬಿಜೆಪಿ ಕಾರ್ಯಕರ್ತರ ಸಭೆ

ಕಾರ್ಕಳ; ಕಾಂಗ್ರೆಸ್ಸಿಗೆ ಮತ ನೀಡಿದರೆ ಹಿಂದೂ ವಿರೋಧಿ ಶಕ್ತಿಗಳು ವಿಜ್ರಂಬಿಸುತ್ತವೆ, ಹಿಂದೂಗಳ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ಸಿನ ಆಸೆ, ಅಮಿಷ, ಜಾತಿ ರಾಜಕಾರಣಕ್ಕೆ ಮತ ಹಾಕದೆ ಅಭಿವೃ ದ್ಧಿಯನ್ನು ಬೆಂಬಲಿಸಿ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ವಿ ಸುನಿಲ್ ಕುಮಾರ್ ಹೇಳಿದರು. ಕಡ್ತಲ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತೀಯವಾದಿಗಳ ಪರವಿದೆ, ಕಾಂಗ್ರೆಸ್ಸಿಗೆ ಹಾಕುವ ಒಂದೊಂದು

ಜಿಲ್ಲಾ ಪಂಚಾಯತ್ ಸದಸ್ಯರಿಂದ ಕಾರ್ಕಳದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಟ್ಟಿ ಬಿಡುಗಡೆ

ಕಾರ್ಕಳ: ಕಾರ್ಕಳದ ಐದು ಮಂದಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ತಮ್ಮ ಅವಧಿಯಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಶಾಸಕರ ಅನುದಾನದಿಂದ ಆಗಿರುವಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ಪಟ್ಟಿ ಬಿಡುಗಡೆಗೊಳಿಸಿದರು. ಚುನಾವಣೆಯಲ್ಲಿ ನಮ್ಮ ಸಚಿವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕಾರ್ಯಕ್ಷೇತ್ರದ ಅಭಿವೃದ್ಧಿಯನ್ನು ಅವರಿಂದ ಮಾಡಿಸಿಕೊಳ್ಳಬೇಕು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯಕೋಟಿಯನ್, ಉದಯ ಶೆಟ್ಟಿ,

ಕಾಪುವಿನ ವಿವಿಧೆಡೆ ವಿನಯ ಕುಮಾರ್ ಸೊರಕೆ ಮತಯಾಚನೆ

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಅವರು ಹಿರಿಯಡ್ಕ ಬೊಮ್ಮಾರುಬೆಟ್ಟು ಪಾಪುಜೆ ದರ್ಖಾಸ್ತು ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿ ಮತಭೇಟೆ ನಡೆಸಿದರು. ಮತಯಾಚನೆಯ ವೇಳೆ ಪಂಚನಬೆಟ್ಟು, ಬಸ್ತಿ ವ್ಯಾಪ್ತಿಯಲ್ಲಿ ಮತದಾರರು ಕುಡಿಯುವ ನೀರಿನ ಸಮಸ್ಯೆ ಯನ್ನು ತಿಳಿಸಿದ್ದು ಸೊರಕೆಯವರು ಕೂಡಲೇ ಅಧಿಕಾರಿಗಳಿಗೆ ಸ್ಥಳದಲ್ಲೇ ಕಾಲ್ ಮಾಡಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ರು.ಗುಡ್ಡೆಯಂಗಡಿಯಲ್ಲಿ ಮತ ಪ್ರಚಾರದ

ಪುತ್ತೂರಿನ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ.

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿದರು. ವೇದನಾಥ್ ಸುವರ್ಣ, ಸತೀಶ್ ಕೆಡೆಂಜಿ, ಡಾ. ರಾಜಾರಾಮ್, ಜಯಪ್ರಕಾಶ್ ಬದಿನಾರು ಮತ್ತಿತರ ನಾಯಕರೊಂದಿಗೆ ಆಗಮಿಸಿದ ಅಶೋಕ್ ರೈ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.