ಕಾವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ : ಬಿಜೆಪಿಗರಿಗೂ ಗ್ಯಾರಂಟಿ ಕಾರ್ಡು ಕೊಡಿ; ಅಶೋಕ್ ರೈ

ಪುತ್ತೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ, ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ನಾಲ್ಕು ಗ್ಯಾರಂಟಿ ಯಓಜನೆಯು ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಯಾಗುತ್ತದೆ. ಈಗಾಗಲೇ ಕಾರ್ಯಕರ್ತರು ಎಲ್ಲಾ ಮನೆಗಳಿಗೂ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡು ವಿತರಣೆ ಮಾಡುತ್ತಿದ್ದು ಬಿಜೆಪಿಗರ ಮನೆಗಳಿಗೂ ಕಾರ್ಡು ವಿತರಿಸಿ ಯಾವುದೇ ತಾರತಮ್ಯ ಮಾಡಬೇಡಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು. ಸರಕಾರದ ಯೋಜನೆ ಅದು ರಾಜ್ಯದ ಎಲ್ಲಾ ಜನರಿಗೂ ತಲುಪಬೇಕು. ಉತ್ತಮ ಯೋಜನೆಗೆ ಬಹು ಬೆಂಬಲ ವ್ಯಕ್ತವಾಗಿದೆ. ಬಿಜೆಪಿಯ ಕೆಲವರು ನನಗೆ ವೈಯುಕ್ತಿವಾಗಿ ಕರೆ ಮಾಡಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಕೊಂಡಾಡಿದ್ದಾರೆ. ಈ ಕಾರಣಕ್ಕೆ ಬಿಜೆಪಿಗರು ಎಂದು ಅವರಿಗೆ ಕಾರ್ಡು ಕೊಡದೇ ಇರಬೇಡಿ ಅವರೂ ನಮ್ಮ ಜೊತೆ ಸೇರಿಕೊಳ್ಳುತ್ತಾರೆ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಈ ಕಾರಣಕ್ಕೆ ಯಾರನ್ನೂ ದೂರ ಮಾಡಬೇಡಿ, ಬಿಜೆಪಿಗರ ಮನೆಗೂ ತೆರಳಿ ಓಟು ಕೇಳಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇಲ್ಲಿ ಏನೂ ಇರಲಿಲ್ಲ ಆ ಬಳಿಕ ಎಲ್ಲವನ್ನೂ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಆದರೆ ಇಂದು ಅದನ್ನು ಯಾರೋ ಅನುಭವಿಸಿ ಲೂಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕರದ ಯೋಜನೆಗಳು ಅದು ದೇಶದ ಎಲ್ಲಾ ಜನರ ಹಿತ ದೃಷ್ಟಿಯಿಂದ ಕೂಡಿದ್ದಾದರೆ ಬಿಜೆಪಿಯ ಯೋಜನೆಗಳು ಕೆಲವೇ ವರ್ಗಕ್ಕೆ ಸೀಮಿತವಾಗಿದ್ದಾಗಿದ್ದು ಅದು ಹೆಚ್ಚು ಬಾಳಿಕೆ ಬರುವುದಿಲ್ಲ ಎಂದು ಹೇಳಿದರು. ಪುತ್ತೂರಿನ ಜನತೆ ದುರಾಡಳಿತದಿಂದ ರೋಸಿ ಹೋಗಿದ್ದಾರೆ. ಶಾಸಕರು ಬದಲಗಲಿ , ಸರಕಾರ ಬದಲಾಗಲಿ ಎಂದು ಹಾತೊರೆಯುತ್ತಿದ್ದಾರೆ.ನೂರಾರು ನಿರೀಕ್ಷೆಯನ್ನಿಟ್ಟು ಜನ ಇಂದು ಕಾಂಗ್ರೆಸ್ ಕಡೆ ಒಲವು ತೋರುತ್ತಿದ್ದು ನಿಮ್ಮ ನಿರೀಕ್ಷೆಗಳನ್ನು ಎಂದಿಗೂ ಹುಸಿಮಾಡಲು ಬಿಡುವುದಿಲ್ಲ. ಪುತ್ತೂರಿನ ಜನ ತಲೆ ಎತ್ತಿನಿಲ್ಲುವಂತೆ ಮಾಡುತ್ತೇನೆ, ನೀವು ಯಾರಿಗೂ ತಲೆಬಾಗಬೇಡಿ, ಜನಪ್ರತಿನಿಧಿಯಾದವರು ಜನರ ಸೇವೆ ಹೇಗೆ ಮಾಡಬೇಕು ಎಂಬುದನ್ನು ಮಾಡಿತೋರಿಸುತ್ತೇನೆ . ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ನಮ್ಮನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ವೇದಿಕೆಯಲ್ಲಿ ಮಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಬೆಟ್ಟ ಈಶ್ವರಭಟ್,ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.