Home Posts tagged #internationalyogaday

ಪುತ್ತೂರು : ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ನಿಖಿಲ್ ಬಿ. ಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಇದರ ಆಶ್ರಯದಲ್ಲಿ ಅ17 ಮತ್ತು 18ರಂದು ಬೆಂಗಳೂರಿನ ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸು ಪ ಪೂ ಕಾಲೇಜಿನಲ್ಲಿ ನಡೆದ ‘ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾ ಕೂಟ 2024-25’ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ

ಪುತ್ತೂರು: ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನಾಚರಣೆ

ಪುತ್ತೂರು: ಕೃಷ್ಣ ನಗರದ ಅಲುಂಬುಡ ಎಂಬಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಿಕ್ಷಕರಾಗಿರುವ ಶ್ರೀಯುತ ಹರಿಪ್ರಸಾದ್ ಪಿಕೆ ರವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಒತ್ತಡ ರಹಿತ ಬದುಕನ್ನು ನಡೆಸಬಹುದು ಎಂದರು. ಕಾರ್ಯಕ್ರಮದ

ಮಂಗಳೂರು : ಬಿಜೆಪಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪಿವಿಎಸ್ ಸರ್ಕಲ್ ಬಳಿಯ ವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಭಾರತದ ಸನಾತನ ಪರಂಪರೆಯನ್ನು ಇಡೀ ವಿಶ್ವವೇ ಗೌರವಿಸುವ ದಿನವೇ ಅಂತಾರಾಷ್ಟ್ರೀಯ ಯೋಗ ದಿನ. ಮನುಷ್ಯನ ದೇಹದ ಸಮತೋಲನಕ್ಕಾಗಿ ಯೋಗದ ಕೊಡುಗೆ ಅನನ್ಯವಾಗಿದ್ದು ದೇಹದ ಜೊತೆಗೆ ಮನಸ್ಸಿಗೂ

ಪುತ್ತೂರು: ಲಿಟ್ಲ್ ಫ್ಲವರ್ ಶಾಲೆಯಲ್ಲಿ ವಿಶ್ವ ಯೋಗದಿನಾಚರಣೆ

ಲಿಟ್ಲ್ ಫ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿ ವಿಶ್ವ ಯೋಗದಿನಾಚರಣೆಯನ್ನು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ನಂತರ ಮಾತನಾಡಿದ ಅವರು ” ಭಾರತೀಯ ವೈದ್ಯ ಪದ್ಧತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನವಿದೆ.ಯೋಗದಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಸಾಧ್ಯವಿದ್ದು, ಯೋಗ ಇದ್ದರೆ ರೋಗವಿಲ್ಲ, ಯೋಗ ದಿನ ನಿತ್ಯದ ಭಾಗವಾಗಲಿ ” ಎಂದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ವಿಲ್ಮಾ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಡಾ. ಎನ್‌ಎಸ್‌ಎಎಮ್ ಪಿಯು ಕಾಲೇಜಿನಲ್ಲಿ ಆಚರಣೆ

ಮಂಗಳೂರಿನ ನಂತೂರಿನಲ್ಲಿರುವ ಡಾ. ನಿಟ್ಟೆ ಶಂಕರ್ ಅಡ್ಯಂತಾಯ ಮೆಮೋರಿಯಲ್ ಪಿಯು ಕಾಲೇಜಿನ ಎನ್‌ಎಸ್‌ಎಸ್ ಯೂನಿಟ್ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು. ಕಾಲೇಜಿನ ಅಡಿಟೋರಿಯಂನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪತಂಜಲಿ ಯೋಗ ಸಮಿತಿಯ ಉಪಾಧ್ಯಕ್ಷರಾದ ಡಾ. ಜ್ಞಾನೇಶ್ವರ್ ನಾಯಕ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವಲ್ಲಿ ಯೋಗದ ಪಾತ್ರ ಮಹತ್ವದ್ದು ಎಂದರು. ಡಾ. ಎನ್ ಎಸ್‌ಎಎಮ್

ಶ್ರೀನಗರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ದೇಶದ ಜನತೆಗೆ ಯೋಗ ದಿನದ ಶುಭಾಶಯ ತಿಳಿಸಿದ ಮೋದಿ

ಜಗತ್ತು ಯೋಗವನ್ನು ಜಾಗತಿಕ ಕ್ಷೇಮದ ಪ್ರಬಲ ರಾಯಭಾರಿ ಎಂಬಂತೆ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಶ್ಮೀರದ ‘ಶೇರ್ ಇ ಕಾಶ್ಮೀರ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್’ನಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಜನರು ತಮ್ಮ ವೈಯಕ್ತಿಕ ಯೋಗಕ್ಷೇಮಕ್ಕೂ ಸಮಾಜದ ಕಲ್ಯಾಣಕ್ಕೂಸಂಬಂಧವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ನಾವು

ಪ್ರಕೃತಿ ಯೋಗ ಕುಟೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮಂಗಳೂರಿನ ಕದ್ರಿ ಕೈಬಟ್ಟಲಿನ ಪ್ರಕೃತಿ ಯೋಗ ಕುಟೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಮನೋಹರ್ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯೋಗಾಸನದಿಂದ ಅದ್ಭುತ ಶಕ್ತಿ ಉಂಟಾಗುತ್ತದೆ. ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಎಜೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಶಾಂತ್ ಮಾರ್ಲ ಅವರು ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ