ಶ್ರೀನಗರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ದೇಶದ ಜನತೆಗೆ ಯೋಗ ದಿನದ ಶುಭಾಶಯ ತಿಳಿಸಿದ ಮೋದಿ

ಜಗತ್ತು ಯೋಗವನ್ನು ಜಾಗತಿಕ ಕ್ಷೇಮದ ಪ್ರಬಲ ರಾಯಭಾರಿ ಎಂಬಂತೆ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾಶ್ಮೀರದ ‘ಶೇರ್ ಇ ಕಾಶ್ಮೀರ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್’ನಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಜನರು ತಮ್ಮ ವೈಯಕ್ತಿಕ ಯೋಗಕ್ಷೇಮಕ್ಕೂ ಸಮಾಜದ ಕಲ್ಯಾಣಕ್ಕೂಸಂಬಂಧವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಾವು ಒಳಗಿಂದ ಶಾಂತವಾಗಿದ್ದಾಗ, ಜಗತ್ತಿನ ಮೇಲೂ ಧನಾತ್ಮಕ ಪರಿಣಾಮವನ್ನು ಉಂಟುಮಾಡಬಲ್ಲೆವು. ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ಹೊಸ ಮಾರ್ಗಗಳನ್ನು ಯೋಗ ಪರಿಚಯಿಸಿದೆ’ ಎಂದು ಪ್ರತಿಪಾದಿಸಿದ್ದಾರೆ.

add - tandoor .

Related Posts

Leave a Reply

Your email address will not be published.