Home Posts tagged ISRO

ಪುಷ್ಪಕ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ..!

ಇಸ್ರೋದವರು ತಯಾರಿಸಿದ ಆರ್‌ಎಲ್‌ವಿ ಪುಷ್ಪಕ್ ಮರುಬಳಕೆ ಉಡ್ಡಯನ ವಾಹನದ ಪರೀಕ್ಷೆಯು ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಇದು ಆರ್‌ಎಲ್‌ವಿ ಮೂರನೆಯ ಪ್ರಯೋಗ ವಾಹನವಾಗಿದೆ.ಚಳ್ಳಕೆರೆಯಲ್ಲಿರುವ ಪರೀಕ್ಷಾ ರನ್‌ವೇಯಿಂದ ಇಂದು ಪ್ರಯೋಗ ಪರೀಕ್ಷೆ ಯಶಸ್ಸು ಕಂಡಿತು. 2016ರಲ್ಲಿ ಮೊದಲ ಪ್ರಯೋಗ ನಡಸಲಾಗಿತ್ತು. 2023ರಲ್ಲಿ ಎರಡನೇ ಪ್ರಯೋಗ ಯಶಸ್ವಿಯಾದ ಬೆನ್ನಿಗೇ ಮೂರನೆಯ

ಆಂಧ್ರಪ್ರದೇಶ : ಎಕ್ಸ್‌ ರೇ ಪೋಲಾರಿಮೀಟರ್ ಉಪಗ್ರಹ ಯಶಸ್ವಿ ಉಡಾವಣೆ

ಎಕ್ಸ್‌ ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಎಕ್ಸ್‌ ರೇ ಪೋಲಾರಿಮೀಟರ್ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್‌ ಪೊಸ್ಯಾಟ್’ ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸಂಬಂಧಿಸಿದ ಇತರೆ 9 ಉಪಗ್ರಹಗಳನ್ನು